ಹುಬ್ಬಳ್ಳಿ: ವಿದ್ಯುತ್ ದರ ಹೆಚ್ಚಿಸಿ ಶಾಕ್ ನೀಡಿದ ಹೆಸ್ಕಾಂಗೆ ಚೇಂಬರ್ ಆಫ್ ಕಾಮರ್ಸ್ ತರಾಟೆಗೆ ತೆಗೆದುಕೊಂಡಿದೆ. ಉತ್ತರ ಕರ್ನಾಟಕದ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ವಿದ್ಯುತ್ ದರ ಏರಿಕೆಗೆ ಖಂಡನೆ ವ್ಯಕ್ತಪಡಿಸಿದ್ದು ಹೆಸ್ಕಾಂ ಮತ್ತು ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ವಿದ್ಯುತ್ ದರ ಏರಿಕೆ ಹಿಂಪಡೆಯಲು ಸರ್ಕಾರಕ್ಕೆ 1 ವಾರ ಗಡವು ನೀಡಿದ್ದು ಹಿಂಪಡೆಯದಿದ್ದರೆ ಕೈಗಾರಿಕೆಗಳನ್ನು ಬಂದ್ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಹೆಸ್ಕಾಂಗೆ ಏಳು ದಿನಗಳ ಕಾಲ ಗಡುವು ನೀಡುತ್ತೇವೆ. ಹೆಸ್ಕಾಂ ನೀಡಿದ ಬಿಲ್‌ನಲ್ಲಿ 75% ರಷ್ಟು ಪಾವತಿ ಮಾಡುತ್ತೇವೆ. ಉಳಿದ ಬಿಲ್‌ನ್ನ ಬಾಕಿ ಉಳಿಸಿಕೊಳ್ಳುತ್ತೇವೆ. ಏಳು ದಿನಗಳಲ್ಲಿ ಬಿಲ್ ಕಡಿಮೆ ಮಾಡಬೇಕು. ಒಂದು ವೇಳೆ ಬಿಲ್ ಕಡಿಮೆ ಮಾಡದೆ ಹೋದ್ರೆ, ಕೈಗಾರಿಕೆಗಳನ್ನ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಮಧ್ಯಪ್ರವೇಶ ಮಾಡಿ ವಿದ್ಯುತ್ ದರವನ್ನ ಕಡಿಮೆ ಮಾಡಬೇಕು ಎಂದು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ್ ಒತ್ತಾಯಿಸಿದ್ದಾರೆ.
ಕೆಇಆರ್‌ಸಿಯಿಂದ ಮನಸ್ಸೋ ಇಚ್ಚೆ ವಿದ್ಯುತ್ ದರ ಏರಿಕೆಯಾಗಿದೆ. ಹೆಸ್ಕಾಂ ಕೆಇಆರ್‌ಸಿ ಮುಂದೆ ಪ್ರತಿ ಯುನಿಟ್ ಗೆ 50% ಹೆಚ್ಚಳದ ಬೇಡಿಕೆ ಇಟ್ಟಿತ್ತು. ಈ ರೀತಿಯ ಬೇಡಿಕೆ ಇಟ್ಟಾಗ 20 ರಿಂದ 30 ಪೈಸೆ ಕೆಇಆರ್‌ಸಿ ಹೆಚ್ಚಳ ಮಾಡ್ತಾ ಇತ್ತು. ಆದ್ರೆ ಈ ವರ್ಷ ಪ್ರತಿ ಯುನಿಟ್‌ಗೆ 2.54 ರೂ. ನಿಗದಿ ಮಾಡಿದೆ. ಇದರಿಂದಾಗಿ ಜನಸಾಮಾನ್ಯರ ಮೇಲೆ ಬಹಳಷ್ಟು ಹೊರೆಯಾಗಿದೆ. ಹೆಸ್ಕಾಂ ತಕ್ಷಣ ವಿದ್ಯುತ್ ಬಿಲ್‌ನ್ನ ಕಡಿಮೆ ಮಾಡಬೇಕೆಂದು ವಿನಯ್ ಆಗ್ರಹಿಸಿದ್ದಾರೆ.
ನಷ್ಟದ ಕಾರಣ ನೀಡಿ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಪ್ರತಿ ಯೂನಿಟ್ ಗೆ 70 ಪೈಸೆ ದರ ಏರಿಕೆ ಮಾಡಿ ಮೇ 12ರಂದು ಆದೇಶ ಪ್ರಕಟಿಸಿತ್ತು. ಹೊಸ ಪರಿಷ್ಕೃತ ದರವನ್ನು ಜೂನ್ 1ರಿಂದ ಅನ್ವಯವಾಗುವಂತೆ ಅದೇಶ ಪ್ರಕಟಿಸಲಾಗಿತ್ತು. ಇನ್ನು ಮತ್ತೊಂದೆಡೆ ದರ ಹೆಚ್ಚಳದ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ