ಕೂಗು ನಿಮ್ಮದು ಧ್ವನಿ ನಮ್ಮದು

ಚೀನಾ ಮೇಲೆ ಕಣ್ಣಿಡುವುದಕ್ಕೆ ಬಂತು ಇಸ್ರೇಲ್ ಡ್ರೋನ್

ನವದೆಹಲಿ: ಗಡಿಯಲ್ಲಿ ತಂಟೆ ಮಾಡುವ ಚೀನಾದ ಮೇಲೆ ಕಣ್ಣಿಡುವುದಕ್ಕೆ ಭಾರತೀಯ ಸೇನೆಗೆ ಇದೀಗ ಇಸ್ರೇಲ್‍ನ ಅತ್ಯಾಧುನಿಕ ಡ್ರೋನ್‍ಗಳ ಬಲ ಬಂದಿದೆ. ಕೇಂದ್ರ ಸರ್ಕಾರ ನೀಡಿದ ತುರ್ತು ಖರೀದಿ ಅಧಿಕಾರ ಬಳಸಿಕೊಂಡು ಸೇನಾಪಡೆಯು ಇಸ್ರೇಲ್‍ನಿಂದ ಹೆರಾನ್ ಡ್ರೋನ್‍ಗಳನ್ನು ಖರೀದಿ ಮಾಡಿವೆ. ಅತೀ ಶೀಘ್ರದಲ್ಲೇ ಈ ಡ್ರೋನ್‍ಗಳು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ನಿಯೋಜನೆ ಆಗುತ್ತಿದೆ.

ಈಗಾಗಲೇ ಈ ಡ್ರೋನ್‍ಗಳು ಕಾರ್ಯಸನ್ನದ್ಧ ಸ್ಥಿತಿಯಲ್ಲಿವೆ. ಹಿಂದಿನಿಂದಲೂ ಭಾರತೀಯ ಸೇನೆಯಲ್ಲಿರುವ ಡ್ರೋನ್‍ಗಳಿಗಿಂತ ಇವು ಅತೀ ಹೆಚ್ಚು ಆಧುನಿಕವಾಗಿದ್ದು, ಇವುಗಳ ಆ್ಯಂಟಿ ಜಾಮಿಂಗ್ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಲಾಗಿದ್ದು,
ಈ ಡ್ರೋನ್‍ಗಳು ಸತತ ೫೨ ಗಂಟೆ ಹಾರಾಡುವ, ಗರಿಷ್ಠ ೩೫೦೦ ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂಥಹ ೪ ಡ್ರೋನ್‍ಗಳನ್ನು ಖರೀದಿಸಲು ಭಾರತ ೧೫೦೦ ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಲಡಾಖ್ ಗಡಿಗೆ ರಷ್ಯಾ ನಿರ್ಮಿತ ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಅಣಿಗೊಳಿಸಲು ಭಾರತ ಸಜ್ಜಾಗಿರುವ ಹೊತ್ತಿನಲ್ಲೇ ಈ ಹೊಸ ಅಸ್ತ್ರವೂ ಲಭ್ಯವಾಗಿವೆ.

error: Content is protected !!