ಕೂಗು ನಿಮ್ಮದು ಧ್ವನಿ ನಮ್ಮದು

ಮೂಗಿನಲ್ಲಿ ಕೊಕೇನ್ ಸೇವಿಸುತ್ತಿದ್ದ ನಟಿ ತುಪ್ಪದ ಬೆಡಗಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ಮತ್ತು ನಟಿ ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ಮಾಡುತ್ತಿರುವುದು ದೃಢಪಟ್ಟಿದ್ದು, ಇದೀಗ ಮತ್ತೆ ಇಬ್ಬರಿಗೂ ಸಂಕಷ್ಟ ಎದುರಾಗಿದೆ.

ತಲೆ ಕೂದಲು ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಿದ್ದು ದೃಢಪಟ್ಟಿದೆ. ಬರೋಬ್ಬರಿ ೧೦ ತಿಂಗಳ ನಂತರ FSL ವರದಿ CCB ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿರುವ ನಟಿಯರು ಈಗ ಮತ್ತೆ ಲಾಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಿನ ೩೩ನೇ CCH ಕೋರ್ಟ್‍ಗೆ CCB ಪೊಲೀಸರು ೧೪೫ ಪುಟಗಳ ಆರೋಪ ಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ.

ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ರು. ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ಈ ಕೋಕೇನ್ ಸೇವಿಸುತ್ತಿದ್ರು. ರಾಗಿಣಿ ATM ಕಾರ್ಡ್, ನೋಟ್ ಮೂಲಕ ನಶೆ ಏರಿಸಿಕೊಳ್ಳುತ್ತಿದ್ರು. ಎಂಬುದು ಆರೋಪಪಟ್ಟಿಯಲ್ಲಿ ಅನಾವರಣವಾಗಿದೆ. ನಟಿ ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ATM ಕಾರ್ಡ್‍ನಿಂದ ಉಜ್ಜುತ್ತಿದ್ರು. ನಂತರ ಆ ಕೊಕೇನ್ ಪೌಡರ್ ಅನ್ನು ಎರಡು ಲೈನ್ ಆಗಿ ಮಾಡಿ ಬಳಿಕ ೧೦೦ ರೂಪಾಯಿಯನ್ನುಸುರುಳಿ ಸುತ್ತಿ ನೋಟಿನ ಮೂಲಕ ಡ್ರಗ್ಸ್ ಸೇವೆನೆ ಮಾಡುತ್ತಿದ್ರು.

ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ರು. ಎಂಬುದಾಗಿ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ CCB ದೋಷಾರೋಪಣೆ ಮಾಡಿದೆ. ಹೈದರಾಬಾದ್ನ CSFL ಲ್ಯಾಬ್ ನೀಡಿರುವ ವರದಿಯನ್ನು CCB ತರಿಸಿಕೊಂಡಿದೆ. ಈ ಹಿಂದೆಯೇ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ನಂತರ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ.

error: Content is protected !!