ಕೂಗು ನಿಮ್ಮದು ಧ್ವನಿ ನಮ್ಮದು

ಸಚಿವ ಸುಧಾಕರ್ ಒಬ್ಬರಾಕ್ಷಸ, ಭ್ರಹ್ಮರಾಕ್ಷಸ: ಕೈ ಮುಖಂಡ ಯಲವಳ್ಳಿ ರಮೇಶ್ ವಾಗ್ದಾಳಿ

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೋಡೋಕೆ ಎಷ್ಟು ಸೌಮ್ಯವಾಗಿದ್ದಾನೋ ಅಷ್ಟೆ ರಾಕ್ಷಸ ಬುದ್ದಿ ಇದೆ. ಕೇವಲ ರಾಕ್ಷಸ ಮಾತ್ರವಲ್ಲ, ಭ್ರಹ್ಮರಾಕ್ಷಸ. ಕೋರೋನಾ ಹೆಸರಲ್ಲಿ ಸತ್ತ ಹೆಣಗಳನ್ನೂ ಮಾರಾಟ ಮಾಡಿಕೊಂಡು ದುಡ್ಡು ಮಾಡಿದೋನು. ಈ ಬಾರಿ ಆತನನ್ನ ಗೆಲ್ಲಿಸಿದ್ರೆ ಸಾಮಾನ್ಯರ ಬದುಕಂತು ಬರ್ಬರವಾಗಿ ಹೋಗುತ್ತೆ ಅಂತ ಕಾಂಗ್ರೇಸ್ ಮುಖಂಡ ಯಲುವಳ್ಳಿ ರಮೇಶ ಕೆಂಡಕಾರಿದ್ದಾರೆ.

ಸಚಿವ ಸುಧಾಕರ ವಿರುದ್ದ ವಾಗ್ದಾಳಿ ನಡೆಸಿರುವ ವಿಡಿಯೋ

ಚಿಕ್ಕಬಳ್ಳಾಪುರ ತಾಲ್ಲೂಕು ಗೆಂಗರೇಕಾಲುವೆ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಪ್ರಜಾಧ್ವನಿ ಪೂರ್ವ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾಂಗ್ರೆಸ್ ಮುಖಂಡ ಯಲುವಳ್ಳಿ ರಮೇಶ್, ಸಚಿವ ಸುಧಾಕರ್ ವಿರುದ್ದ ಏಕವಚನದಲ್ಲಿ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. 10-15 ಕೋಟಿ ಖರ್ಚುಮಾಡಿ ಚಿಕ್ಕಬಳ್ಳಾಪುರ ಉತ್ಸವ ಮಾಡಿದ್ದು ಯಾರ ಸಂತೋಷಕ್ಕಾಗಿ. ಉತ್ಸವದ ಹೆಸರಲ್ಲಿ ಅರೆ ಬರೆ ಬಟ್ಟೆ ಉಟ್ಟ ಹೆಣ್ಣು ಮಕ್ಕಳಿಂದ ಡ್ಯಾನ್ಸ್ ಮಾಡಿಸಿದ್ದಾರೆ. ಮಂತ್ರಿಗಳನ್ನ ಕರೆಸಿ ನಿನ್ನನ್ನ ಇಂದ್ರ ಚಂದ್ರ ಅಂತ ಹೊಗಳಿಸಿಕೊಂಡೆ ಸಾವಿರಾರು ಜನರ ಸಮಯ ಕಳೆದ ಉತ್ಸವಕ್ಕೆ ಅಷ್ಟೊಂದು ಹಣ ಖರ್ಚು ಮಾಡಿದ ನೀನು ಗ್ರಾಮೀಣ ಭಾಗದಲ್ಲಿ, ನಗರದಲ್ಲಿ ಅದೆಷ್ಟೋ ಜನ ಬಾಡಿಗೆ ಮನೆಗಳಲ್ಲಿ ವಾಸ ಮಾಡ್ತವರೆ. ಅವರಿಗೆ ಮನೆ ಕಟ್ಟಿಕೊಡೋ ಕೆಲಸ ಮಾಡಬಹುದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಇಷ್ಟ ಬಂದ ಹಾಗೆ ಹಣ ಖರ್ಚು ಮಾಡಿಸಿದೆ. ಕೊನೆಗೆ ಸತ್ತ ಹೆಣಗಳನ್ನು ಮಾರಾಟ ಮಾಡಿಕೊಂಡು ದುಡ್ಡು ಮಾಡಿದೆ. ಇನ್ನೆಷ್ಟು ಕೊಳ್ಳೆ ಹೋಡಿಬೇಕು ಅಂತಿದ್ದೀಯ. ಈ ಕ್ಷೇತ್ರದ ಜನರ ಪಾಲಿಗೆ ನೀರು ರಾಕ್ಷಸ, ಬರೀ ರಾಕ್ಷಸ ಅಲ್ಲ ಭ್ರಹ್ಮ ರಾಕ್ಷಸ. ಈವನನ್ನ ಈ‌ ಭಾರಿ ಸೋಲಿಸದಿದ್ರೆ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೆ ಬದುಕು ಬರ್ಬರ ಆಗುತ್ತೆ ಹಾಗಾಗಿ ಆತನನ್ನ ಈ ಬಾರಿ ಸೋಲಿಸಿ ಎಂದು ಕಿಡಿಕಾರಿದರು.

error: Content is protected !!