ಕೂಗು ನಿಮ್ಮದು ಧ್ವನಿ ನಮ್ಮದು

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ Exclusive ಫೋಟೊಗಳು

ಸಂವಿಧಾನ ಶಿಲ್ಪ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಪ್ರೇಮಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಶಿಕ್ಷಣಕ್ಕೆ ಬಹಳ ಮಹತ್ವ ಕೊಡುತ್ತಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಿದ್ದಾರ್ಥ್ ಕಾಲೇಜಿನ ಜೊತೆಗೆ ಉನ್ನತ ಶಿಕ್ಷಣಕ್ಕಾಗಿ ಮಿಲಿಂದ್ ಕಾಲೇಜನ್ನು ಔರಂಗಬಾದ್ ನಲ್ಲಿ ಕಟ್ಟಿಸಿದ್ದು ಮತ್ತೊಂದು ಖುಷಿ ವಿಚಾರ.

ಮಿಲಿಂದ್ ಎಂಬುವುದು ಕ್ರಿ.ಶ. 2ನೇ ಶತಮಾನದಲ್ಲಿದ್ದ ಬೌದ್ಧ ದೊರೆಯ ಹೆಸರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾರ್ವಜನಿಕ ದಾನಿಗಳಿಂದ ಹಣ ಸಂಗ್ರಹಿಸಿ ಈ ಕಾಲೇಜಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಿದರು. ಮಿಲಿಂದ್ ಕಾಲೇಜಿನ ಈ ಬೃಹತ್ ಕಟ್ಟಡವನ್ನು ಸಹ ಅಂಬೇಡ್ಕರ್ ರವರು

ಮುಂದೆ ತಮ್ಮ ಮಕ್ಕಳು ಅಥವಾ ಮುಂದಿನ ವಂಶಸ್ಥರಿಗೆ ಸಿಗದ ಹಾಗೆ ಟ್ರಸ್ಟ್ ಹೆಸರಿನಲ್ಲಿ ಅಥವಾ ಟ್ರಸ್ಟ್ ಮುಚ್ಚಿದರೆ ಸರ್ಕಾರಕ್ಕೆ ಎಂದು ಬರವಣಿಗೆ ಮಾಡಿದ್ದು ಅವರು ನಿಸ್ವಾರ್ಥ ಸೇವೆಗೆ‌ ಹಿಡಿದ ಕೈಗನ್ನಡಿಯಾಗಿದೆ. ಡಾ.ಅಂಬೇಡ್ಕರ್ ರವರು ಈ ಕಟ್ಟಡದ ಜಾಗ ವೀಕ್ಷಣೆ ಮಾಡುತ್ತಿರುವ ಎಕ್ಸಕ್ಲೂಸಿವ್ ಫೋಟೋ ನೋಡಬಹುದಾಗಿದೆ.

error: Content is protected !!