ಕೂಗು ನಿಮ್ಮದು ಧ್ವನಿ ನಮ್ಮದು

ಒಂದೇ ಒಂದು ದಿನದಲ್ಲಿ ನಾಲವತ್ತಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ

ಮಂಡ್ಯ: ಒಂದೇ ಒಂದು ದಿನದಲ್ಲಿ ೪೦ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿಯೊಂದು ಕಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನಲ್ಲಿ ನಡೆದಿದ್ದು, ಅಲ್ಲಿಯ ಜನರಲ್ಲಿ ಆತಂಕ ಸೃಷ್ಟಿಸಿದೆ. K.R.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಮೊದಲ ಬಾರಿಗೆ ೫ ಜನರಿಗೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿಯೂ ನಂತರ K.R ಪೇಟೆ ಪಟ್ಟಣ, ಪುರದ ಗೇಟ್, ಕುಂದನಗಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ, ಮಾಕವಳ್ಳಿ ಭಾಗದಲ್ಲಿ ಸುಮಾರು ನಾಲವತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.

ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಜನರ ಮೇಲೆ, ಕಬ್ಬು ಕಡಿಯುತ್ತಿದ್ದ ಜನರ ಮೇಲೆ, ಜೊತೆಗೆ ಜಮೀನಿನಲ್ಲಿ ಮತ್ತು ಗ್ರಾಮದಲ್ಲಿ ಇದ್ದಂತವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ಸದ್ಯ ಹುಚ್ಚು ನಾಯಿ ಕಡಿತಕ್ಕೆ ಒಳಗಾದವರಿಗೆ K.R.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಲಾಗಿದೆ. ಹುಚ್ಚು ನಾಯಿ ಕಡಿತದಿಂದ ಜನರಲ್ಲಿ ಆತಂಕ ಮೂಡಿದ್ದು, ಹುಚ್ಚು ನಾಯಿ ಸೆರೆಗೆ ಅಲ್ಲಿ ಮಂದಿ ಆಗ್ರಹಿಸುತ್ತಿದ್ದಾರೆ.

error: Content is protected !!