ಬೆಂಗಳೂರು: ‘ದೇಶಕ್ಕೆ ಪ್ರಜ್ಞಾವಂತರು ಮುಖ್ಯ. ಪೆನ್ನು, ಪೇಪರ್ ಕೈಯಲ್ಲಿ ಇದ್ದಾಗ ಹೇಗೆ ಬಳಸಬೇಕೋ ಹಾಗೇ ಬಳಸಬೇಕು. ಅಧಿಕಾರ ಇದ್ದಾಗ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಜಿ ಆರೋಗ್ಯ ಸಚಿವ ಸುಧಾಕರ್ ಉದಾಹರಣೆ ನೀಡಿದ ಡಿಕೆ ಶಿವಕುಮಾರ್, ಆರೋಗ್ಯ ಸಚಿವರಾಗಿ ಸುಧಾಕರ್ ಕನಕಪುರಕ್ಕೆ ಬಂದಿದ್ರು, ನಮ್ಮ ಕನಕಪುರಕ್ಕೆ ಇದ್ದ ಆಸ್ಪತ್ರೆಯನ್ನ ತೆಗೆದುಕೊಂಡು ಹೋದ್ರು. ಅದಕ್ಕೆ ಅಧಿಕಾರ ಇದ್ದಾಗ, ಪೆನ್ನು ಜನರ ಒಳಿತಿಗಾಗಿ ಬಳಸಬೇಕು. ಒಳ್ಳೇದು ಮಾಡೋದಿದ್ರೆ ಇವತ್ತೇ ಮಾಡಬೇಕು, ನಾಳೆ ಬಗ್ಗೆ ಯೋಚಿಸಬಾರದು ಎಂದು ಡಿಸಿಎಂ ಸಲಹೆ ನೀಡಿದರು.