ಕೂಗು ನಿಮ್ಮದು ಧ್ವನಿ ನಮ್ಮದು

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಒಬ್ಬರಿಗೆ 1 ರೂ. ಕೊಡಬೇಕಾದ್ರೆ ಅಕೌಂಟೆಬಿಲಿಟಿ ಇಟ್ಟುಕೊಳ್ಳಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ನೀಡಬೇಕೆಂದು ತೀರ್ಮಾನಿಸಿದ್ದೆವು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಟ್ಯಾಕ್ಸ್ ಕಟ್ಟುವವರು $2 ಸಾವಿರ ಕೊಡಿ ಎಂದು ಕೇಳುವುದಿಲ್ಲ.

2 ಸಾವಿರ ಹಣ ಬೇಡ ಎಂದು ಬಹಳ ಜನ ಪತ್ರ ಬರೆದಿದ್ದಾರೆ. ಪಾಪ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಕೊಡ್ತೀವಿ ಎಂದಿದ್ದರು. ಮೊದಲು ಬಿಜೆಪಿಯವರು ಎಲ್ಲರ ಖಾತೆ 15 ಲಕ್ಷ ರೂ. ಹಾಕಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಬೇಡಿ ಎನ್ನಲು ಆಗುತ್ತಾ? ಎಂದರು.

error: Content is protected !!