ಕೂಗು ನಿಮ್ಮದು ಧ್ವನಿ ನಮ್ಮದು

ಇಲಾಖೆಗಳ ನಡುವೆ ಕೋಆರ್ಡಿನೇಷನ್ ಇಲ್ಲದಿರೋದು ಗೊತ್ತಾಗಿದೆ: ಡಿಕೆ ಶಿವಕುಮಾರ್

ಬೆಂಗಳೂರು ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಬಿಜೆಪಿಯವರು ಕೂಡ ಅವರ ಕಾಲದ ಬಗ್ಗೆ ಚರ್ಚೆ ಮಾಡಿದ್ದಾರೆ. ಇಲಾಖೆಗಳ ನಡುವೆ ಕೋಆರ್ಡಿನೇಷನ್ ಇಲ್ಲದಿರುವುದು ಗೊತ್ತಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು ಆಗಬೇಕು. ಕುಡಿಯುವ ನೀರು, ಕಸ ನಿರ್ವಹಣೆ, ಟ್ರಾಫಿಕ್ ವಿಚಾರ ಬಗ್ಗೆ ಮಾಸ್ಟರ್ ಪ್ಲಾನ್ ಕೇಳಲಾಗಿದೆ.

ಸ್ಟ್ರಾಮ್ ವಾಟರ್ ಡ್ರೈನ್ ಬಗ್ಗೆ, ಶಿಲ್ಟ್ ತೆಗೆಯುವ ಬಗ್ಗೆ ಮಾಹಿತಿ ಕೇಳಿದ್ದೇನೆ. ಶಿಲ್ಟ್ ಎಲ್ಲಿಗೆ ಹಾಕಲಾಗುತ್ತಿದೆ ಅಂತ ಫೋಟೋ ದಾಖಲೆ ಕೇಳಿದ್ದೇನೆ. ಕೃಷ್ಣಾ ಅವರ ಕಾಲದಲ್ಲಿ ತಂಡ ಮಾಡಲಾಗಿತ್ತು. ನಂದನ್ ನೀಲೇಕಣಿ ಸೇರಿದಂತೆ ಹಲವರ ನೇಮಕ ಮಾಡಲಾಗಿತ್ತು. ಗ್ಲೋಬಲ್ ಬೆಂಗಳೂರು ವಿಷನ್ ಬೆಂಗಳೂರು ಮಾಡಲು ಒಂದು ಅಡ್ವೈಸರಿ ಕಮಿಟಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

error: Content is protected !!