ಕೂಗು ನಿಮ್ಮದು ಧ್ವನಿ ನಮ್ಮದು

ಕಣ್ಣು ಕಿವಿ ಹೃದಯ ಇಲ್ಲದ ಸರ್ಕಾರ – ಡಿ.ಕೆ.ಶಿವಕುಮಾರ್ ಲೇವಡಿ

ಚಾಮರಾಜನಗರ: ರಾಜ್ಯದಲ್ಲಿ ಇರೋದು ಕಣ್ಣು, ಕಿವಿ, ಹೃದಯ ಇಲ್ಲದ ಸರ್ಕಾರವಾಗಿದೆ, ಆಕ್ಸಿಜನ್ ದುರಂತದಲ್ಲಿ ಮೃತರಾದವರ ಮರಣ ದೃಡೀಕರಣ ಪತ್ರ ಕೊಡಿಸಲು ಸಾಧ್ಯವಾಗದ ಸ್ಥಿತಿಗೆ ಬಂದಿದೆ ಸರ್ಕಾರದ ಆಡಳಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ಆಡಳಿತ ಕಾರ್ಯ ವೈಖರಿ ಬಗ್ಗೆ ಕಿಡಿಕಾರಿದರು.

ಚಾಮರಾಜನಗರದಲ್ಲಿ ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಸರ್ಕಾರ ಕೊಲೆ ಮಾಡಿದೆ, ಇದರ ಹೊಣೆಯನ್ನು ಸರ್ಕಾರ ಹೊರಬೇಕಿದೆ ಆದರೆ ಸರ್ಕಾರವು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು.

ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಮಧ್ಯಸ್ಥಿಕೆ ಬರಬೇಕಾಗಿದೆ. ಮುಖ್ಯಮಂತ್ರಿಗಳಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಮಯ ಸಾಲದಾಗಿದೆ ಎಂದು ಹೇಳಿ, ಚಾಮರಾಜನಗರದಲ್ಲಿ ನಡೆದಿರುವ ಭಾರಿ ದುರಂತ ಪ್ರಕರಣದ ಹಿಂದಿರುವ ಸಚಿವರು ಮತ್ತು ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿ, ಚಾಮರಾಜನಗರ ಪ್ರಕರಣದಲ್ಲಿ ಮೃತರಾದ ಕುಟುಂಬಗಳಿಗೆ ಕಾಂಗ್ರೇಸ್ ಕಾರ್ಯಕರ್ತರು ನೀಡಿದ ದೇಣಿಗೆಯಿಂದ ಆಕ್ಸಿಜನ್ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಣ ನೀಡುತ್ತಿದ್ದೇವೆ ವಿನಃ ನನ್ನ ಹಣವಲ್ಲ ಎಂದು ಸ್ಪಷ್ಟ ಪಡಿಸಿದರು.

ಚಾಮರಾಜನಗರದಲ್ಲಿ ಮೇ 2 ರ ರಾತ್ರಿ ನಡೆದ ಆಕ್ಸಿಜನ್ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಸಚಿವರು , ಅಧಿಕಾರಿಗಳ ಮೇಲೆ 302 ಕೇಸ್ ಹಾಕಿ ಜೈಲಿಗೆ ಕಳುಹಿಸಬೇಕಾಗಿದೆ ಇದನ್ನು ಮಾಡದ ರಾಜ್ಯ ಸರ್ಕಾರವು ತಪ್ಪಿತಸ್ಥ ಆಪಾಧಿತರನ್ನು ಕಾಪಾಡಲು ಮುಂದಾಗಿದೆ, ಹೈ ಕೋರ್ಟ್ ಈಗಾಗಲೇ ಸ್ವಯಂ ಪ್ರೇರಿತವಾಗಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ವರದಿ ತರಿಸಿಕೊಂಡ ಬಳಿಕ ರಾಜ್ಯ ಸರ್ಕಾರವು ಏಕ ಸದಸ್ಯ ತನಿಖಾ ಆಯೋಗ ರಚಿಸುವ ಅವಶ್ಯಕತೆ ಏನಿತ್ತು. ಪ್ರಕರಣ ನಡೆದಿರುವುದು ಚಾಮರಾಜನಗರದಲ್ಲಿ ಆದರೆ ಕಛೇರಿಯನ್ನು ಮೈಸೂರಿನಲ್ಲಿ ತೆರದದಿರುವುದು ಎಷ್ಟು ಸಮಂಜಸ ಎಂದು ಹೇಳಿ, ಕೂಡಲೇ ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ಬಿ.ಎ.ಪಾಟೀಲ್ ನೇತೃತ್ವದ ತನಿಖಾ ಆಯೋಗವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಘೋಷ್ಟಿಯಲ್ಲಿ ಕೆ.ಪಿಸಿಸಿ ಕಾರ್ಯಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ದೃವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಪಿ.ಮರಿಸ್ವಾಮಿ ಹಾಜರಿದ್ದರು.

error: Content is protected !!