ಧಾರವಾಡ: ಇಲ್ಲಿಯ ಮುರುಘಾಮಠದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ₹55 ಲಕ್ಷ ರೂ ಅನುದಾನದ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಶ್ರೀಗಳಿಗೆ ನೀಡಿದರು. ಇದೇ ವೇಳೆ ಶಾಸಕ ಅಮೃತ ದೇಸಾಯಿ ಹಾಗು ಗಣ್ಯರು ಮುರುಘಾಮಠದ ಶ್ರೀಗಳಾದ ಮಲ್ಲಿಕಾರ್ಜುನ ಸ್ವಾಮಿಜಿಗಳಿಗೆ ರಾಜ್ಯ ಸರಕಾರದಿಂದ ಬಿಡುಗಡೆಯಾದ ಹಣದ ಚೆಕ್ಕ್ ಹಸ್ತಾಂತರಿಸಿದರು, ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಹಗಲಿರುಳು ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಅಂಗನವಾಡಿ ಹಾಗು ಆಶಾ ಕಾರ್ಯಕರ್ತರಿಗೆ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಪ್ರತಿಯೊಬ್ಬರಿಗು ಪ್ರೋತ್ಸಾಹ ಧನ ₹2000 ಹಾಗು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಐದನೂರು ಜನರಿಗೆ ಉಚಿತ ಕೋವಿಡ ಲಸಿಕೆ ನೀಡಲಾಯಿತು.