ಕೂಗು ನಿಮ್ಮದು ಧ್ವನಿ ನಮ್ಮದು

ಆಧುನಿಕ ಸೂಫಿಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ್ ಇನ್ನಿಲ್ಲ: ತೀವ್ರ ಹೃದಯಾಘಾತದಿಂದ ಕೊನೆಯುಸಿರು

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ (Ibrahim Sutar) ಇಂದು ಬೆಳಿಗ್ಗೆ 6.30ಕ್ಕೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ (76) ನಿಧನರಾಗಿದ್ದಾರೆ. ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು.

ಇಂದು ಬೆಳಗಿನ ಜಾವ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ತಲುಪಿಸುವ ಮಾರ್ಗದಲ್ಲಿ ಸೂಫಿಸಂತ ಇಬ್ರಾಹಿಂ ಸುತಾರ್ ಇಹಲೋಕ ತ್ಯೆಜಿಸಿದ್ದಾರೆ.

error: Content is protected !!