ಕೂಗು ನಿಮ್ಮದು ಧ್ವನಿ ನಮ್ಮದು

ಕೆಲಸ ಮುಗಿಸಿಕೊಂಡು ಬಂದು ಬಜ್ಜಿ ತಿಂದು ತಾಯಿ, ಮಗ ಸಾವು

ಬೆಳಗಾವಿ: ವಿಷ ಆಹಾರ ತಿಂದು ತಾಯಿ ಹಾಗೂ ಮಗ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಪಾರ್ವತಿ ಮಳಗಲಿ ೫೩ ವರ್ಷದವಳು ಮಗ ಸೋಮನಿಂಗಪ್ಪ ಮಳಗಲಿ ೨೮ ವರ್ಷದವನು ಮೃತ ದುರ್ದೈವಿಗಳಾಗಿದ್ದಾರೆ.

ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದ ನಂತರ ತಾಯಿ,ಮಗ ಇಬ್ರು ಬಜ್ಜಿ ಮಾಡಿ ತಿಂದಿದ್ರು. ಆಗ ಆರೋಗ್ಯದಲ್ಲಿ ಏರುಪೇರಾಗಿ ತಾಯಿ ಮಗ ಇಬ್ಬರು ಸಾವನ್ನಪಿದ್ದಾರೆ. ಬಜ್ಜಿ ಮಾಡಿ ತಿಂದ ಇಬ್ಬರಿಗೂ ವಾಂತಿ ಬೇಧಿ ಶುರುವಾಗಿದೆ. ಇದರಿಂದ ತೀವ್ರ ಅಸ್ವಸ್ಥರಾದ ಅಮ್ಮ ಮಗ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ವೇಳೆ ದಾರಿಯ ಮಧ್ಯದಲ್ಲಿ ತಾಯಿ,ಮಗ ಇಬ್ರು ಸಾವನ್ನಪ್ಪಿದ್ದಾರೆ.

ನಿನ್ನೆ ಮೃತದೇಹಗಳ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಮಾರಿಹಾಳ ಪೊಲೀಸರು ಕಾಯುತ್ತಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ.

error: Content is protected !!