ಬೆಂಗಳೂರು: ಈಜಲು ಹೋಗಿದ್ದ ಹತ್ತನೇ ತರಗತಿಯ ಮೂವರು ಬಾಲಕರು ನೀರುಪಾಲಾ ಗಿರುವಂತಹ ಘಟನೆ ನಿನ್ನೆ ಸಂಜೆ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನೀಲಾದ್ರಿ ಬಳಿ ನಡೆದಿದೆ. ತೀರ್ಥ(13), ಕಿರಣ್(13), ಫೈಜಲ್(14) ಮೃತರು. ಮಂಗಳವಾರ ಸಂಜೆ ಆಟ ಆಡಲು ಹೊರ ಹೋಗಿದ್ದ ತೀರ್ಥ, ಫೈಜಲ್ ರಾತ್ರಿ ಆದರೂ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಆವಾಗ ಕೆರೆ ಬಳಿ ಬಾಲಕರ ಸೈಕಲ್, ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿವೆ.
ಈಜು ಬಾರದಿದ್ದರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ನಿನ್ನೆಯಿಂದ ಬಾಲಕರ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.