ಕೂಗು ನಿಮ್ಮದು ಧ್ವನಿ ನಮ್ಮದು

ಮೈಸೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಹರಿದು ಹದಿನಾಲ್ಕು ವರ್ಷದ ಬಾಲಕ ಸಾವು

ಮೈಸೂರು: ಕೆಎಸ್ಆರ್ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಸ್ ನಿಲ್ದಾಣದಲ್ಲಿ ನಡೆದಿದೆ. ಹೆಚ್ಡಿ ಕೋಟೆ ತಾಲ್ಲೂಕು ನಂಜೀಪುರ ಗ್ರಾಮದ ಪ್ರಜ್ವಲ್ ಎಂಬ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!