ಬೆಳಗಾವಿ; ಈ ದಿನ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ರೈಲ್ವೆ ಅಪಘಾತದಲ್ಲಿ ಮೂರು ಜನರು ಮೃತ ಪಟ್ಟಿದ್ದು ಮೋದಲನೆಯದಾಗಿ ಪಾಶ್ಚಾಪೂರ-ಸೂಲಧಾಳ ರೈಲು ನಿಲ್ದಾಣಗಳ ಮದ್ಯೆ ರೈಲ್ವೆ ಕಿ.ಮಿ. ನಂ: 640/000-100 ರಲ್ಲಿ ಅಶೋಕ ತಂದೆ: ಈರಪ್ಪ ಕಟ್ಟಿಮನಿ ವಯಾ: 46 ವರ್ಷ ವಾಸ: ಅಂಕಲಗಿ ತಾ: ಗೋಕಾಕ ಇತನು ವಿಪರಿತ ಮದ್ಯಪಾನ ಚಟದಿಂದ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುತ್ತಾನೆ.
ಎರಡನೇಯದಾಗಿ ಬೆಳಗಾವಿ ನಗರದ ಸಮರ್ಥ ನಗರದ ಹತ್ತಿರ ವಿರುವ ರೈಲ್ವೆ ಹಳಿಗಳ ರೈಲ್ವೆ ಕಿ. ಮಿ. ನಂ: 612/100-000 ರಲ್ಲಿ ಅಪರಿಚಿತ ಗಂಡಸು ವಯಾ: ಅಂ: 60 ವರ್ಷ ದವನು ಚಲಿಸುವ ರೈಲಿನ ಮುಂದೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತನ ವಿವರ: ಅಪರಿಚಿತ ಗಂಡಸು ವಯಾ: ಅಂ: 60 ವರ್ಷ ,ಸಾದರಣಾ ಮೈಕಟ್ಟು, ಗೋಧಿ ಮೈಬಣ್ಣ, ಎತ್ತರ 5’4” ಬೋಳು ತಲೆ ಮೃತನು ಬಿಳಿ ಬಣ್ಣದ ಪುಲ್ ಶರ್ಟ್, ಗ್ರೇ ಕಲರ್ ಲೋಯರ್ ಪ್ಯಾಂಟ್, ಮೇಹಂದಿ ಕಲರ್ ನಿಕ್ಕರ್ ಧರಿಸಿರುತ್ತಾನೆ.
ಮೂರನೇಯದಾಗಿ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಹತ್ತಿರ ಸುಮಾರು 55 ವರ್ಷದವನು ಅಪರಿಚಿತ ಗಂಡಸು ಆಕಸ್ಮಿಕವಾಗಿ ರೈಲಿಗೆ ಸಿಕ್ಕು ಮೃತ ಪಟ್ಟಿದ್ದು , ಮೃತನ ಎತ್ತರ 5’5” ಗೋಧಿ ಮೈಬಣ್ಣ, ಸದೃಡ ಮೈಕಟ್ಟು ,ಬಿಳಿ ಮತ್ತು ಕಪ್ಪು ಮಿಶ್ರಿತ ತಲೆ ಕೂದಲು, ಹಾಗೂ ಸಣ್ಣಗೆ ದಾಡಿ,ಮಿಸೆ. ಬಿಟ್ಟಿರುತ್ತಾನೆ. ಮೃತನು ಬಿಳಿ ಬಣ್ಣದ ಪುಲ್ ಶರ್ಟ್, ಮತ್ತು ನೀಲಿ ಬಣ್ಣದ ಹಾಪ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಬೂಟು ಧರಿಸಿರುತ್ತಾನೆ. ಮೃತರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ, ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ದೂರವಾನಿ ಸಂಖ್ಯೆ: 0831-2405273 ನೇದ್ದಕ್ಕೆ ಸಂಪರ್ಕಿಸಲು ರೈಲ್ವೆ ಪೊಲೀಸರು ತಿಳಿಸಿರುತ್ತಾರೆ.