ಕೂಗು ನಿಮ್ಮದು ಧ್ವನಿ ನಮ್ಮದು

ಶಾಸಕರ ನಿಧಿಯಲ್ಲಿ ಹೈಟೆಕ್ ಅಂಬ್ಯುಲೆನ್ಸ ವಿತರಣೆ ಮಾಡಿದ ಡಿಸಿಎಮ್ ಸವದಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಗೆ ನೂತನವಾಗಿ ಖರೀದಿಸಿದ ಅಂಬ್ಯುಲೆನ್ಸ ವಾಹನವನ್ನು ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಹಸ್ತಾಂತರಿಸಿದರು. ನದಿ ಇಂಗಳಗಾಂವ ಮತ್ತು ಅಥಣಿ ತಾಲೂಕು ಆಸ್ಪತ್ರೆಗೆ ಖರೀದಿಸಿದ ಎರಡು ಅಂಬ್ಯುಲೆನ್ಸಗಳನ್ನು ವೈದ್ಯಾಧಿಕಾರಿ ಅವರಿಗೆ ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಅವರು ಬೆಳಗಾವಿ, ಮಿರಜ್, ವಿಜಯಪುರ, ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಇಷ್ಟುದಿನ ಬೆಳಗಾವಿ ಮೀರಜ್ ಪಟ್ಟಣಗಳಿಂದ ಖಾಸಗಿ ಅಂಬ್ಯುಲೆನ್ಸ ತರಿಸಬೇಕಿತ್ತು ಅದಕ್ಕೆ ಹದಿನೈದು ಇಪ್ಪತ್ತು ಸಾವಿರ ಖರ್ಚು ಆಗುತ್ತಿತ್ತು. ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ನದಿ ಇಂಗಳಗಾಂವ, ಅಥಣಿ ಆಸ್ಪತ್ರೆಗಳಿಗೆ ಎರಡು ಅಂಬ್ಯುಲೆನ್ಸ ಕೊಟ್ಟಿದ್ದೇವೆ. ಕಳೆದ ಬಾರಿ ಕೊಟ್ಟ ಅಂಬ್ಯುಲೆನ್ಸ ಅನ್ನು ಬೆಳಗಾವಿ ಯಲ್ಲಿ ಉದ್ರಿಕ್ತ ಜನರ ಗುಂಪು ಸುಟ್ಟುಹಾಕಿದ್ದರಿಂದ ಸದ್ಯ ಹೊಸ ಅಂಬ್ಯುಲೆನ್ಸ ಕೊಡುತ್ತಿದ್ದೇವೆ. ಒಂದು ಅಂಬ್ಯುಲೆನ್ಸ ವೆಂಟಿಲೇಟರ್ ಹೊಂದಿದ ಸಂಪೂರ್ಣ ಸುಸಜ್ಜಿತ ವಾಹನವಾಗಿದ್ದು ಇನ್ನೊಂದರಲ್ಲಿ ಆಕ್ಸಿಜನ್ ಅಳವಡಿಸುವ ವ್ಯವಸ್ಥೆ ಇದೆ. ಐಸಿಯು ವ್ಯವಸ್ಥೆ ಇರುವ ಅಂಬ್ಯುಲೆನ್ಸ ತುರ್ತು ಸಂಧರ್ಭದಲ್ಲಿ ಬಳಕೆಯಾಗಲಿದೆ.

2020-21 ನೇ ಸಾಲಿನ ಶಾಸಕರ ನಿಧಿಯನ್ನು ಈ ಖರೀದಿಗಾಗಿ ಬಳಕೆ ಮಾಡಲಾಗಿದ್ದು ಸಮುದಾಯ ಭವನಕ್ಕಿಂತ ಇದು ಜನರ ಜೀವ ಉಳಿಸಲು ಉಪಯುಕ್ತವಾಗಲಿದೆ. ಅಷ್ಟೇ ಅಲ್ಲದೆ ಸಕ್ಕರೆ ಕಾಯಿಲೆ ಇರುವ ಜನರ ಚಿಕಿತ್ಸೆ ದೃಷ್ಟಿಯಿಂದ ಎರಡು ಡಯಾಲಿಸಿಸ್ ಮಷೀನ್ ಗಳನ್ನು ಹೆಚ್ಚುವರಿ ಆಗಿ ಕೊಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಗಾಗಿ 3 ರಿಂದ 3 ವರೆ ಸಾವಿರ ರೂಪಾಯಿಗಳಷ್ಟು ಹಣ ಖರ್ಚಾಗುವದನ್ನು ತಪ್ಪಿಸಲು ಬಡವರ ಅನುಕೂಲಕ್ಕಾಗಿ ಡಯಾಲಿಸಿಸ್ ಮಷೀನ್ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

error: Content is protected !!