ಬೆಳಗಾವಿ: ಕೋವಿಡ್-19 ಪ್ರಕರಣಗಳಲ್ಲಿ ಮರಣ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನ ಎರಡನೇ ಅಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮರಣ ಹೊಂದಿರುವ
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೇ ಹಿಂದುಳಿದ ಎನ್.ಎಫ್.ಎಸ್.ಡಿ.ಸಿ ಮತ್ತು ಎನ್‌ಬಿಸಿಎಫ್‌ಡಿಸಿ ಯಿಂದ ರೂ. 5.00 ಲಕ್ಷ ನೀಡಲಾಗುವುದು.ರೂ. 5.00 ಲಕ್ಷದಲ್ಲಿ ರೂ. 4.00 ಲಕ್ಷ ಅವಧಿ ಸಾಲ ರೂ. 6% ಬಡ್ಡಿ ದರದಲ್ಲಿ ಮತ್ತು ರೂ. 1.00 ಲಕ್ಷ ಸಹಾಯ ಧನ ರೂಪದಲ್ಲಿ ಆರ್ಥಿಕ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಲ್ಲಿಸಬೇಕಾಗಿರುವ ಅವಶ್ಯಕ ದಾಖಲೆಗಳು : ಕೋವಿಡ್-19 ಮೃತ ಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗದವರು ಜಾತಿ ಪ್ರಮಾಣ ಪತ್ರ , ಕುಟುಂಬದ ಆದಾಯ ಪ್ರಮಾಣ ಪತ್ರ , ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ , ಕುಟುಂಬದ ರೇಶನ ಕಾರ್ಡ, ಮೃತ ವ್ಯಕ್ತಿಯ ಆಧಾರ ಕಾರ್ಡ , ವಾರಸದಾರರ ಆಧಾರ ಕಾರ್ಡ, ಆರ್.ಟಿ.ಪಿ.ಸಿ.ಆರ್ ಟೆಸ್ಟ್ ರಿಪೋರ್ಟ ಹಾಗೂ ಕೋವಿಡ್-19 ದಿಂದ ಮೃತ ಪಟ್ಟಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಈ ಎಲ್ಲಾ ಅವಶ್ಯಕ ದಾಖಲೆಗಳನ್ನು ಜೂನ್ 24 ರ ಒಳಗಾಗಿ ಸೂಚಿಸಿದ ವಿಳಾಸಗಳಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ದಾಖಲೆಗಳನ್ನು ಸಲ್ಲಿಸಬೇಕಾದ ವಿಳಾಸಗಳು: ಪರಿಶಿಷ್ಟ ಜಾತಿಯವರು ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ,ಬೆಳಗಾವಿ, ಸುವರ್ಣ ವಿಧಾನ ಸೌಧ ಕೊಠಡಿ ಸಂಖ್ಯೆ 123 ಹಲಗಾ, ಬೆಳಗಾವಿ-590020 ವಿಳಾಸಕ್ಕೆ ಸಲ್ಲಿಸಬೇಕು. ಪರಿಶಿಷ್ಟ ವರ್ಗದವರು ಜಿಲ್ಲಾ ವ್ಯವಸ್ಥಾಪಕರು, ಶ್ರೀ.ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ,ಬೆಳಗಾವಿ, ಸುವರ್ಣ ವಿಧಾನ ಸೌಧ ಕೊಠಡಿ ಸಂಖ್ಯೆ 222 ಹಲಗಾ, ಬೆಳಗಾವಿ-590020 ವಿಳಾಸಕ್ಕೆ ಸಲ್ಲಿಸಬೇಕು. ಅದೇ ರೀತಿ, ಹಿಂದುಳಿದ ವರ್ಗದವರು ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ,ಬೆಳಗಾವಿ ಸುವರ್ಣ ವಿಧಾನ ಸೌಧ ನೆಲಮಹಡಿ ಹಲಗಾ, ಬೆಳಗಾವಿ-590020 ವಿಳಾಸಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಸೌಲಭ್ಯ ಪಡೆಯಲು ಇರಬೇಕಾದ ಪರತ್ತುಗಳು : ಮೃತ ವ್ಯಕ್ತಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ,ಇತರೆ ಹಿಂದುಳಿದ ವರ್ಗಕ್ಕೆ ಸೇರಿರಬೇಕು ಮತ್ತು
ಕುಟುಂಬದ ಮುಖ್ಯಸ್ಥನಾಗಿದ್ದು ದುಡಿಯುವ (Earning Member) ವ್ಯಕ್ತಿ ಆಗಿರಬೇಕು.
ವಯಸ್ಸು 18 ರಿಂದ 60 ರ ಒಳಗೆ ಇರಬೇಕು ಮತ್ತು ವಾರ್ಷಿಕ ಆದಾಯ ರೂ. 3.00 ಲಕ್ಷ ಒಳಗೆ ಇರಬೇಕು
ಕೋವಿಡ್ ನಿಂದ ಮರಣ ಹೊಂದಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ
ಪತ್ರ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.