ಕೂಗು ನಿಮ್ಮದು ಧ್ವನಿ ನಮ್ಮದು

ಮೈಸೂರು ದಸರಾ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ, ಉದ್ಘಾಟನೆಗೆ ಕೇವಲ ನೂರು ಜನರಿಗಷ್ಟೇ ಅವಕಾಶ

ಮೈಸೂರು,ಬೆಂಗಳೂರು: ದಸರಾ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ. ದಸರಾ ಹಬ್ಬ, ದುರ್ಗಾ ಪೂಜೆಗೆ ಮಾರ್ಗಸೂಚಿ ರೆಡಿಯಾಗಿದೆ. ಈ ಮೂಲಕ ಮೈಸೂರಿಗೆ, ಇಡೀ ರಾಜ್ಯಕ್ಕೆ ಮತ್ತೊಂದು ಗೈಡ್‍ಲೈನ್ಸ್ ಎನ್ನುವಂತಾಗಿದೆ. ಮೈಸೂರು ದಸರಾಗೆ ಮಾರ್ಗಸೂಚಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಂತರ, ಜೊತೆಗೆ ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

ವರ್ಚುವಲ್ ಮೂಲಕ ದಸರಾ ವೈಭವ ವೀಕ್ಷಣೆಗೆ ಅವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ. ದಸರಾ ಹಬ್ಬಕ್ಕೆ ಬಂದಿರುವ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯವಾಗಿರುತ್ತದೆ. ಜೊತೆಗೆ ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಸಂಖ್ಯೆ ಸೀಮಿತ ಮಾಡಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ನೆಗೆಟಿವ್ ರಿಪೋರ್ಟ್ ಜೊತೆಗೆ ಒಂದು ಡೋಸ್ ಲಸಿಕೆ ಕಡ್ಡಾಯವಾಗಿದೆ.

ಕರ್ತವ್ಯ ನಿರತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ, ಕಲಾವಿದರಿಗೆ ಇದು ಅನ್ವಯವಾಗಲಿದೆ. ಇನ್ನೂ ಮೈಸೂರು ಸೇರಿದ ಕರ್ನಾಟಕದ ಕಲಾವಿದರಿಗೆ ಆದ್ಯತೆ ನೀಡುವುದು. ಚಾಮುಂಡಿ ತಾಯಿ ಬೆಟ್ಟಕ್ಕೆ ನೂರು ಮಂದಿಗೆ ಮಾತ್ರವೇ ೮ ದಿನಗಳ ಕಾಲ ಅವಕಾಶ ಜೊತೆಗೆ ೫೦೦ ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿದಿನ ಸಂಜೆ ೨ ಗಂಟೆ ಮೀರದಂತೆ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಜಂಬೂ ಸವಾರಿಗೆ ೫೦೦ ಜನರಿಗೆ ಮಾತ್ರ ಅವಕಾಶ ನಿಡಲಾಗುತ್ತಿದೆ.

ಮೈಸೂರು ಹೊರತಾಗಿ ರಾಜ್ಯದ ಇತರೆಡೆ ನಡೆಸಲಾಗುವ ಆಚರಣೆಗೆ ೪೦೦ಕ್ಕಿಂತ ಹೆಚ್ಚು ಜನ ಒಮ್ಮೆ ಸೇರಬಾರ್ದು. ಸೋಷಿಯಲ್ ಡಿಸ್ಟೇನ್ಸ್ ನಡೆಸಲಾಗುವುದು. ದಸರಾ ಕಾರ್ಯಕ್ರಮಗಳಿಗೆ ನಿಷೇಧ. ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿರುವ ನಿಯಮಗಳನ್ನು ಪಾಲಿಸತಕ್ಕದು, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳ ರೂಲ್ಸ್ ಫಾಲೋ ಮಾಡಬೇಕು.

ಕಾನೂನು ಸುವ್ಯವಸ್ಥೆಗೆ ಭಂಗ ಮಾಡದಂತೆ ದಸರಾ ಹಬ್ಬ ಆಚರಣೆ ಮಾಡಬೇಕು. ರಾಜ್ಯಾದ್ಯಂತ ಆಚರಿಸಲಾಗುವ ನಾಡಹಬ್ಬ, ದಸರಾ ತಯಾರಿ ಹಾಗೂ ಚಟುವಟಿಕೆ ಕುರಿತು ಸಂಬಂಧಿಸಿದ ಪ್ರಾಧಿಕಾರಗಳಿ ಕಟ್ಟು ನಿಟ್ಟಿನ ಕ್ರಮ ವಹಿಸುವುದು. ಕೊವಿಡ್ ೧೯ ಇರುವ ಹಿನ್ನೆಲೆ ದಸರಾ ಹಬ್ಬವನ್ನ ಅತ್ಯಂತ ಸರಳವಾಗಿ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಬೇಕು. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಿ ಆಚರಣೆಗೆ ಮುನ್ನವೇ ನಿಷೇಧ ಕುರಿತು ಪ್ರಚಾರ ಮಾಡತಕ್ಕದ್ದಾಗಿದೆ.

error: Content is protected !!