ಕೂಗು ನಿಮ್ಮದು ಧ್ವನಿ ನಮ್ಮದು

ಡಿ.ಕೆ.ಶಿವಕುಮಾರ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

ಬೆಂಗಳೂರು: PSI ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ದಿವ್ಯಾ ಹಾಗರಗಿ ರಾಜಕೀಯ ಮುಖಂಡರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಹಿಂದಿನ ರಹಸ್ಯ ಬಯಲಾಗಿದೆ. ದಿವ್ಯಾ ಹಾಗರಗಿ ಕಂಡ ಕಂಡ ರಾಜಕೀಯ ಮುಖಂಡರ ಬಳಿ ಫೋಟೋ ತೆಗೆಸಿಕೊಂಡಿರುವುದು PSI ಹಗರಣದಲ್ಲಿ ಸಿಲುಕಿಕೊಂಡ ಬಳಿಕ ಬಯಲಾಗಿತ್ತು. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಜೊತೆಗೂ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಈ ಫೋಟೋ ಹಿಂದಿನ ಅಸಲಿಯತ್ತು ಬಯಲಾಗಿದೆ.

ಡಿ.ಕೆ ಶಿವಕುಮಾರ್ ಮನೆಗೆ ಬಂದು ದಿವ್ಯಾ ಹಾಗರಗಿ ಫೋಟೋ ಸಹ ತೆಗಿಸಿಕೊಂಡಿದ್ಲು ಈ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ ಶಿವಕುಮಾರ್, ಮನೆಗೆ ಬಂದವರು ಫೋಟೋ ತೆಗಿಸಿಕೊಳ್ತಾರೆ ಅದ್ರಲ್ಲಿ ಏನಿದೆ ಎಂದಿದ್ದರು. ಅದು ನಿಜ, ದಿವ್ಯಾ ಹಾಗರಗಿ ಪದೇ ಪದೇ ಡಿ.ಕೆ ಶಿವಕುಮಾರ್ ಮನೆಗೆ ಬರ್ತಾ ಇದ್ದಳು. ತನ್ನ ಕಾರ್ಯ ಸಿದ್ಧಿಗಾಗಿ, ಒಮ್ಮೆ ಮಾತ್ರ ಬಂದಿದಲ್ಲ ಸಾಕಷ್ಟು ಬಾರಿ ಬಂದಿದ್ದಾಳೆ. ಅದು ತನ್ನ ಕಾಲೇಜ್ ತೆರೆಯಲು ಪರವಾನಿಗೆ ಪಡೆಯೋದಕ್ಕಾಗಿ ಎಂಬ ಸತ್ಯ ಇದೀಗ ಬಯಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ.ಕೆ ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರೇ ದಿವ್ಯಾ ಹಾಗರಗಿ ನರ್ಸಿಂಗ್ ಕಾಲೇಜ್‍ಗೆ ಪರವಾಗಿನಿಗೆ ನೀಡಿದ್ದರು. ಈ ಪರವಾನಿಗೆ ಪಡೆಯಲು ದಿವ್ಯಾ ಹಾಗರಗಿ, ಡಿ.ಕೆ ಶಿವಕುಮಾರ್ ಮನೆಗೆ ಬಂದಿದ್ದಳು.

ಡಿಕೆಶಿ ಮಾತ್ರವಲ್ಲ ಉಳಿದ ರಾಜಕೀಯ ಮುಖಂಡರ ಜೊತೆ ಕೂಡ ತೆಗೆಸಿ ಕೊಂಡ ಫೋಟೋ ಹಿಂದಿನ ಸತ್ಯ ಮಾತ್ರ ಗೊತ್ತಾಗುತ್ತಿರಲಿಲ್ಲ. ದಿವ್ಯಾ ಹಾಗರಗಿ ಸುಖಾ ಸುಮ್ಮನೆ ಫೋಟೋ ತೆಗಿಸಿಕೊಳ್ತಾ ಇರಲಿಲ್ಲ. ತನ್ನ ಕಾರ್ಯ ಸಿದ್ಧಿಗಾಗಿಯೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಳು. ಆ ಮಾಸ್ಟರ್ ಪ್ಲಾನ್‍ಗಳು ಕೂಡ ಹಾಗೇ ಸಕ್ಸಸ್ ಕೂಡ ಆಗುತ್ತಿತ್ತು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

error: Content is protected !!