ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿಯವರಿಂದ ಪ್ರತಿ ಜಿಲ್ಲೆಯಲ್ಲಿ ಕೋಮು ಗಲಭೆ ವಾತಾವರಣ ನಿರ್ಮಾಣ: ಡಿ.ಕೆ.ಶಿವಕುಮಾರ್

ಹಾಸನ: ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಲ್ಲಿ ಜನರ ಜೊತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ರು. ಹಾಸನದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ಭ್ರಷ್ಟತೆ ಬಗ್ಗೆ ವಿಶ್ವನಾಥ್, ಕೆಂಪಣ್ಣ ಹೇಳಿದ್ದಾಯ್ತು. ಬೆಲೆ ಏರಿಕೆಯಲ್ಲಿ ಜನರ ಜೊತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ. ಜನರಿಗೆ ಅರ್ಥ ಆಗಿದೆ, ಜನರು ಕೂಡ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ. ಗೊಬ್ಬರದ ಬೆಲೆ ಜಾಸ್ತಿಯಾಗಿದೆ. ಭತ್ತ, ರಾಗಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ರಾಜ್ಯದವರೇ ಕೇಂದ್ರದಲ್ಲಿ ಕೃಷಿ ಸಚಿವರು ಇದ್ದಾರೆ. ಆದ್ರೆ, ಅವರು ಆಸಕ್ತಿ ತೋರುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ರು.

ಬಿಜೆಪಿಯವರು ಪ್ರತಿ ಜಿಲ್ಲೆಯಲ್ಲಿ ಕೋಮು ಗಲಭೆ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ನಿನ್ನೆ ಶಿವಮೊಗ್ಗ, ಉಡುಪಿಗೆ ಹೋಗಿದ್ದೆ. ಎಲ್ಲಾ ಕಡೆ 144 ಸೆಕ್ಷನ್ ಹಾಕಿದ್ದಾರೆ. ಈ ರೀತಿ ಆದ್ರೆ ಹೊರಗಿನಿಂದ ಯಾರೂ ವ್ಯಾಪಾರ ಮಾಡಲು ಬರ್ತಾರೆ. ಇದರಿಂದ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತದೆ. ಹೊರದೇಶದಲ್ಲಿರುವವರು ಗಾಬರಿಯಾಗಿದ್ದಾರೆ. ದೇಶದಲ್ಲಿ ಕೋಮು ಗಲಭೆ ನಡೆಯುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಫೋನ್‌ ನಲ್ಲಿ ಚರ್ಚಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ರು.

ಕರ್ನಾಟಕ ರಾಜ್ಯ ಶಾಂತಿಗೆ ಪ್ರಿಯವಾದದ್ದು, ರಾಜ್ಯ ಬಹಳ ಕಷ್ಟದ ಪರಿಸ್ಥಿತಿಯಲ್ಲಿದೆ. ಏನಾದರೂ ಮಾಡಿ ರಾಜ್ಯ ಉಳಿಸಿಕೊಳ್ಳಬೇಕು. ಹೊರಗಿನಿಂದ ಬರುವ ಜನರನ್ನು ಗೌರವದಿಂದ ನೋಡಬೇಕು. ಕೋಮು ಗಲಭೆ ಆಗದಂತೆ ತಡೆಯಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದರೆ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಲೆನಾಡು ಭಾಗಕ್ಕೆ ಬೇರೆ ಪ್ರಣಾಳಿಕೆ ಬಿಡುಗಡೆ ಮಾಡಿ ಜನರನ್ನು ಸೆಳೆಯುತ್ತೇವೆ. ರಾಜ್ಯದ ಜನತೆಯ ಗೌರವವನ್ನು ಕಾಪಾಡುತ್ತೇವೆ. ಹೊರ ರಾಜ್ಯಗಳಿಂದ ಬರುವವರಿಗೆ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆ. ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪಂಚರಾಜ್ಯ ಚುನಾವಣೆಯಲ್ಲಿ 1 ರಾಜ್ಯದಲ್ಲಿ ಸೋಲನಭುವಿಸಿದರುವುದು, ನಮ್ಮದೇ ಆದ ತಪ್ಪುಗಳಿಂದ ಆಗಿದೆ. ಅಲ್ಲಿ ಬಿಜೆಪಿ ಬರಲಿಲ್ಲ, ಆಪ್ ಬಂದಿದೆ ಎಂದು ಡಿಕೆಶಿ ಹೇಳಿದ್ರು.

4 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಬೀಗಲು ಶುರು ಮಾಡಿತು. ರಾಜ್ಯದಲ್ಲಿ 63 ಲಕ್ಷ ಸದಸ್ಯರು ಡಿಜಿಟಲ್ ಮೆಂಬರ್ ಶಿಫ್ ಪಡೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಎರಡು ಲಕ್ಷದ 35 ಸಾವಿರ ಸದಸ್ಯತ್ವ ಪಡೆದಿದ್ದಾರೆ. ಅರಕಲಗೂಡಿನಲ್ಲಿ ಹೆಚ್ಚು 73 ಸಾವಿರ ಸದಸ್ಯತ್ವ ನೋಂದಣಿ ಮಾಡಿದ್ದಾರೆ. ಅರಸೀಕೆರೆಯಲ್ಲಿ ಕಡಿಮೆಯಿತ್ತು. ನಿನ್ನೆ ಅದಕ್ಕೆ ಅರಸೀಕೆರೆಗೆ ಭೇಟಿ ಕೊಟ್ಟು ಸಲಹೆ, ಸೂಚನೆ ಕೊಟ್ಟು ಬಂದಿದ್ದೇನೆ. ಬಿಜೆಪಿ ಮತ್ತು ದಳದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ತೆಗೆದುಕೊಳ್ಳುತ್ತಿದ್ದಾರೆ. ಇದು ನನಗೆ ಬಹಳ ಆತ್ಮವಿಶ್ವಾಸ ತಂದಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ರು.

error: Content is protected !!