ಬೆಂಗಳೂರು: ಜನರು ಸಾಧನೆ ಮಾಡಿದಾಗ ತಾವು ಓದಿದ ಶಾಲೆಗೆ ಭೇಟಿ ನೀಡಿ ವಿದ್ಯೆ-ಬುದ್ಧಿ ಹೇಳಿಕೊಟ್ಟ ಶಿಕ್ಷಕನ್ನು ಗೌರವಿಸುವುದು, ಅವರಿಂದ ಮತ್ತೊಮ್ಮೆ ಆಶೀರ್ವಾದ ಪಡೆಯೋದು ವಾಡಿಕೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವತ್ತು ಅದನ್ನೇ ಮಾಡಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಶಿವಕುಮಾರ್ ತಾವು ಓದಿದ ಬೆಂಗಳೂರು ರಾಜಾಜಿನಗರದ ನ್ಯಾಶನಲ್ ಪಬ್ಲಿಕ್ ಶಾಲೆಗೆ ಮಾತ್ರ ಸೂಟುಧಾರಿಯಾಗಿ ಹೋದರು. ಶಾಲೆಯ ಆಡಳಿತ ಮಂಡಳಿ ಉಪ ಮುಖ್ಯಮಂತ್ರಿಗಳನ್ನು ಹೂಗುಚ್ಛ ನೀಡಿ ಬರಮಾಡಿಕೊಂಡಿತು.