ಮಂತ್ರಾಲಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬುಧವಾರ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ಚಾಲೆಂಜಿಂಗ್ ಸ್ಟಾರ್ ದರ್ಶನ ಮಂತ್ರಾಲಯದ ಶ್ರೀಗುರು ವೈಭವೋತ್ಸವದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಠದಿಂದ ನಟ ದರ್ಶನರಿಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಬಾಸ್, ರಾಬರ್ಟ್ ಸಿನೇಮಾ ಯಶಸ್ವಿ ಪ್ರದರ್ಶನದ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದೇನೆ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದು ರಾಯರ ದರ್ಶನಕ್ಕೆ ಬಂದಿದ್ದೇನೆ ಎಂದ ದಚ್ಚು, ಇಲ್ಲಿ ಸನ್ಮಾನ ಗಿನ್ಮಾನ ಸೆಕಂಡರಿ. ರಾಯರ ದರ್ಶನ ಪಡೆಯುವುದೇ ಪುಣ್ಯ ಎಂದಿದ್ದಾರೆ.
ಇನ್ನು ಸಿನೇಮಾ ತನ್ನ ಪಾಡಿಗೆ ತಾನು ಯಶಸ್ವಿಯಾಗುತ್ತಿದೆ. ರಾಬರ್ಟ್ 100 ದಿನ ಓಡಬಹುದು, ಕಾದು ನೋಡಿ ಎಂದಿರುವ ಅಭಿಮಾನಿಗಳ ಪಾಲಿನ ಡಿ.ಬಾಸ್, ರಾಬರ್ಟ್ ಸಿನೇಮಾ ನೋಡಿಲ್ಲ ಎನ್ನುವ ಕುರಿತು
ಈಗ ರಾಬರ್ಟ್ ನಡೆಯುತ್ತಾ ಇದೆ. ಮುಂದಿನ ಪ್ರಾಜೆಕ್ಟ್ ಮುಂದೆ ನೋಡಿ. ಅಭಿಮಾನಿಗಳು ಸಿನೇಮಾ ನೋಡುತ್ತಿದ್ದರೆ ಅವರಿಗೆ ಧನ್ಯವಾದಗಳನ್ನು ಹೇಳುತ್ತಿನಿ ಎಂದರಲ್ಲದೇ ಪೈರಸಿ ನಂತರವೂ ಸಿನೇಮಾ ಓಡುತ್ತಿದೆ. ಪೈರಸಿ ಮಾಡಿ ಏನು ಮಾಡಿದರು ಅವರನ್ನೆ ಕೇಳಬೇಕು. ರಾಯರ ದರ್ಶನಕ್ಕೆ ಬಂದಿದ್ದೇನೆ ಅದು ಮಾತ್ರ ಕೇಳಿ ಎಂದ್ರು. ಮತ್ತೊಂದೆಡೆ ಮಂತ್ರಾಲಯದಲ್ಲಿ ಅಭಿಮಾನಿಗಳಿಂದ ಡಿ.ಬಾಸ್ ಎಂದು ಘೋಷಣೆ ಜೋರಾಗಿತ್ತು.