ಕೂಗು ನಿಮ್ಮದು ಧ್ವನಿ ನಮ್ಮದು

ಮನೆಯ ವೈರಿಂಗ್ ಕೆಲಸ ಮಾಡುವ ವೇಳೆ ಕಟಿಂಗ್ ಮಷನ್ ಬ್ಲೇಡ್ ಸಿಡಿದು ಸಿಲುಕಿ ಕಾರ್ಮಿಕ ಸಾವು

ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಕಟ್ಟಡದಲ್ಲಿ ವೈರಿಂಗ್ ಕೆಲಸ ಮಾಡುವ ವೇಳೆ ಕಟಿಂಗ್ ಮಷನ್ ಬ್ಲೇಡ್ ಸಿಡಿದು ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ನಲ್ಲಪ್ಲರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.

ಸುಹೇಲ್. ಮೃತ ದುರ್ದೈವಿ.

ಮೃತ ವ್ಯಕ್ತಿಯನ್ನ ಬಾಗೇಪಲ್ಲಿ ಪಟ್ಟಣದ 32 ವರ್ಷದ ಸುಹೇಲ್ ಎಂದು ತಿಳಿದು ಗುರುತಿಸಲಾಗಿದೆ. ನೂತನ ಮನೆಯ ವೈರಿಂಗ್ ಕೆಲಸ ಮಾಡುವಾಗ ಗೋಡೆ ಕಟಿಂಗ್ ಮಾಡುವಾಗ ಯಂತ್ರದ ಬ್ಲೇಡ್ ರಿವರ್ಸ್ ಹೊಡೆದ ರಬಸಕ್ಕೆ ಸುಹೇಲ್ ಕತ್ತು ಸೀಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತನ ಶವವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!