ಚಿಕ್ಕಮಗಳೂರು: ದಿವಂಗತ ಐಪಿಎಸ್ ಅಧಿಕಾರಿ ಡಿ.ಕೆ.ರವಿ ತಾಯಿ, ಸೊಸೆ ಕುಸುಮಾಳನ್ನ ಗೆಲ್ಲಿಸಿ ಎಂಬ ಮನವಿಗೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂದು ಇಲ್ಲ, ಬಯಸೋದು ಇಲ್ಲ.
ನಮಗೆ ಯಾರ ಮೇಲೂ ವ್ಯಕ್ತಿಗತವಾದ ವಿರೋಧ, ದ್ವೇಷ ಇಲ್ಲ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್, ಜೆಡಿಎಸ್ ವಿರುದ್ಧ. ನಾವು ನಮ್ಮ ಪಕ್ಷಗೆಲ್ಲಬೇಕೆಂದು ಬಯಸುತ್ತೇವೆ. ಅತ್ತೆ-ಸೊಸೆ ತಾಯಿ ಮಕ್ಕಳಂತೆ ಇರಬೇಕೆಂಬುದು ನಮ್ಮ ಬಯಕೆ. ಅವರು ಚುನಾವಣೆ ನಂತರವೂ ಜಗಳ ಆಡಬಾರದು ಎಂದು ಸಚಿವ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.