ಚಾಮರಾಜನಗರ: ಭಾರಿ ಬೀರುಗಾಳಿ ಸಹಿತ ರಾತ್ರಿ ಸುರಿತದ ಮಳೆಗೆ ಜಿಲ್ಲೆಯ ಹನೂರು ತಾಲ್ಲೂಕಿನ ಕಾಡಂಚಿನ ಗಡಿ ಕೂಡ್ಲೂರು ಗ್ರಾಮದ ಸುತ್ತ ಮುತ್ತಲಿನ ರೈತರ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳು ನೆಲ ಕಚ್ಚಿದ್ದು ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿರುವುದು ವರದಿಯಾಗಿದೆ.
ಕೂಡ್ಲೂರು ಗ್ರಾಮದ ಮೂತಿ೯, ಮುನಿಯಪ್ಪ, ನಾಗರಾಜು, ಪನ್ನಿರ್, ಮದಪ್ಪ, ಶಿವ ಮಾದರಾಜ್ ಕೆಂಪಂನದಲಾ ಮತ್ತು ರಾಗಿ ಮಾದಪ್ಪ ಎಂಬುವವರಿಗೆ ಸೇರಿದ 75 ಕ್ಕೂ ಹೆಚ್ಚು ಏಕರೆಯಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳು ನಾಶವಾಗಿದೆ.
ಸಾಲ ಮಾಡಿ ಫಸಲು ಹಾಕಿದ್ದ ರೈತರಿಗೆ ತಡ ರಾತ್ರಿ ಸುರಿದ ಬಿರುಗಾಳಿ ಮಳೆಗೆ ನೆಲಕ್ಕೂರುಳಿದ ಬೆಳೆ ಕಂಡು ಕಣ್ಣೀರು ಹಾಕುವಂತೆ ಆಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಹಾರ ಒದಗಿಸಿ ರೈತರ ಕಷ್ಟಕ್ಕೆ ಸ್ಪಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.