ಆ ಕುಟುಂಬದಲ್ಲಿ ಆ ಇಬ್ಬರು ಸಹೋದರು ಹ್ಯಾಪಿಯಾಗಿ ಕಾರು ಓಡಿಸ್ತಾ ಇದ್ದರು. ತಾವಾಯ್ತು ತಮ್ಮ ಕೆಲಸ ಏನೋ ಅಂತಾ ಸಹೋದರು ಜಾಲಿಯಾಗಿದ್ದರು. ಈ ಸಹೋದರ ಮಧ್ಯ ಆ ಒಂದು ಪ್ರೇಮ ಕಥೆ ಈಗ ಸ್ವಂತ ತಮ್ಮನನ್ನೆ ಬಲಿ ಪಡೆದಿದೆ. ಒಂದೆಡೆ ಹೆಣವಾಗಿ ಬಿದ್ದಿರುವ ತಮ್ಮ ಸುರೇಶ್ ನಾಯ್ಕ, ಮತ್ತೊಂದೆಡೆ ತಮ್ಮನ ಶವಕಂಡು ಅಳುತ್ತಿರುವ ಅಣ್ಣ ಮಂಜು ನಾಯ್ಕ. ಇನ್ನೊಂದೆಡೆ ಬಾರದ ಲೋಕಕ್ಕೆ ಮಂಜು ಸಾಗಿದನ್ನಲ್ಲ ಅಂತಾ ಕಣ್ಣಿರು ಹಾಕ್ತಿರುವ ಸ್ನೇಹಿತರು ಮತ್ತು ಸಂಬಂಧಿಕರು. ಈ ಎಲ್ಲ ದೃಶ್ಯ ಹಾವೇರಿ ಜಿಲ್ಲೆಯ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಕಂಡು ಬಂದಿದೆ. ಹೌದು, ಅಣ್ಣನ ಲವ್ ಸ್ಟೋರಿಗೆ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ.
ಪ್ರೀತಿ ಕುರುಡು, ಯಾವಾಗ ಯಾರ ಮೇಲೆ ಪ್ರೇಮ ಆಗುತ್ತೆ ಎಂಬುದು ತಿಳಿಯದು. ಈ ಪ್ರೀತಿಯ ಜಾಲಕ್ಕೆ ಬಿದ್ದು ಎಷ್ಟೋ ಪರಿವಾರಗಳ ಮಧ್ಯ ರಕ್ತದ ನೆತ್ತರಗಳೆ ಹರಿದಿವೆ. ಇನ್ನು ಪ್ರೀತಿ ಮಾಯ ಬಜಾರಿನ ಮಾಯದ ಜಾಲಕ್ಕೆ ಬಿದ್ದು ಹೆಣವಾದವರೆ ಹೆಚ್ಚು. ಇಂತಹ ಒಂದು ಪ್ರೇಮದ ಜಾಲಕ್ಕೆ ಬಿದ್ದು ಈಗ ಸ್ವಂತ ತಮ್ಮನನ್ನ ಕಳೆದುಕೊಂಡ ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕ ಮಂಜು ನಾಯ್ಕ ಹಾನಗಲ್ ಹುಡಗಿಯನ್ನ ಪ್ರೀತಿಸುತ್ತದ್ದ. ಹಾವೇರಿಯ ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿ ರಾಜೇಶ್ವರಿ ಮೂಹದ ಜಾಲಕ್ಕೆ ಅಣ್ಣ ಮಂಜು ನಾಯ್ಕ್ ಬಿದಿದ್ದ. ಈ ಇಬ್ಬರ ಪ್ರೇಮ ಲೋಕದ ಕಹಾನಿ ಮಧ್ಯ ತಮ್ಮ ಸುರೇಶ ನಾಯ್ಕ ಈಗ ಬಲಿಯಾಗಿದ್ದಾನೆ. ಕೆಲ ತಿಂಗಳ ಹಿಂದೆಯಷ್ಟೇ ಪೋಷಕರನ್ನ ಕಳೆದುಕೊಂಡ ಸಹೋದರಿಬ್ಬರು ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವಿಂಗ್ ಮಾಡುತ್ತಾ ಸಂತೋಷವಾಗಿದ್ದರು. ಹಾವೇರಿ ಜಿಲ್ಲೆಯ ಬಾಳೂರು ತಾಂಡದ ಯುವತಿ ರಾಜೇಶ್ವರಿಯ ಪ್ರೇಮದ ಜಾಲಕ್ಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ಯುವಕ ಮಂಜು ನಾಯ್ಕ ಬಿದ್ದಿದ್ದಾನೆ. ಈ ಇಬ್ಬರ ಪ್ರೇಮ ಕಹಾನಿಯ ಎಂಟು ವರ್ಷದ ಲವ್ ಜರ್ನಿಯಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕ ತನ್ನ ಪ್ರೇಯಿಸಿಯಾದ ರಾಜೇಶ್ವರಿ ಅಳ ಆಸೆಯಂತೆ ಬೇಡಿದಾಗ ಹಣ ನೀಡಿದ್ದಾನೆ. ಇನ್ನು ಯುವತಿ ತನಗೆ ಉದ್ಯೋಗ ಸಿಗುವ ನೆಪ ಹೇಳಿ ಯುವಕನ ಬಳಿ 4 ಲಕ್ಷ ರೂಪಾಯಿಗೂ ಅಧಿಕ ಹಣ ಮತ್ತು 10 ಗ್ರಾಂ ಬಂಗಾರದ ಚೈನ್ಗಳನ್ನು ಪಡೆದಿದ್ದಳಂತೆ.
ಇನ್ನು ಈ ಯುವಕ ತನ್ನ ಪ್ರೇಯಸಿಗೆ ಜಾಬ್ ಆದರೆ ಜೀವನ ಸಂತೋಷವಾಗುವ ಖುಷಿಯಲ್ಲಿ ಬೇಡಿದಷ್ಟು ಹಣ ನೀಡಿದ್ದಾನೆ. ಆದರೆ, ಆ ಹುಡಗಿ ಇವನಿಂದ ಹಣ ಪಡೆದು ಬೇರೊಬ್ಬನ ಬಳಿ ನಿಶ್ಚಿತಾರ್ಥ ಮಾಡಿಕೊಂಡಿದ್ದಳಂತೆ. ಇದನ್ನ ಪ್ರಶ್ನಿಸಿದ ಯುಕವನಿಗೆ ಅದೇನು ಬರಿ ನಿಶ್ಚಿತಾರ್ಥ ಕೈಯಲ್ಲಿ ಇರುವ ಉಂಗುರ ತೆಗೆದರೂ ಆಯ್ತು ಅಂತಾ ಯುವಕನಿಗೆ ಉಸಲಾಯಿಸಿತ್ತಿದ್ದಂಳೆ.
ಇನ್ನು ಮದುವೆ ದಿನ ಹತ್ತಿರವಾಗುತ್ತಿದಂತೆ ಯುವತಿ ಯುವಕನಿಗೆ ದೂರ ಮಾಡಲು ಪ್ರಾರಂಭ ಮಾಡಿದ ಹಿನ್ನಲೆ ಯುವಕ ತನಗೆ ಮದುವೆಯಾಗುವಂತೆ ಹೇಳಿದ್ದನಂತೆ. ಮದುವೆ ಯಾಗದೆ ಇದ್ದರೆ ಕಳೆದ ಮೇ 30 ರಂದು ನಡೆಯುವ ಯುವತಿ ಮದುವೆ ನಿಲ್ಲಿಸುವದಾಗಿ ಯುವಕ ಎಚ್ಚರಿಕೆ ನೀಡಿದ್ದಾನೆ ಅಂತಾ ಯುವತಿ ಕಡೆಯವರು ಹಾನಗಲ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುರೇಶ ನಾಯ್ಕ ನೀಡಿದ ಕಾಟವನ್ನ ತಮ್ಮ ಸಹೋದರರಿಗೆ ರಾಜೇಶ್ವರಿ ತಿಳಿಸಿದ್ದಾಳೆ. ಸಹೋದರರು ಪ್ರೀತಿಸಿದ ಹುಡಗು ಮಂಜು ನಾಯ್ಕಗೆ ಹುಡುಕ್ಕಿದ್ದಾರೆ. ಅವನು ಸಿಗದ ಹಿನ್ನೆಲೆ ಮಂಜು ತಮ್ಮ ಸುರೇಶ್ ನಾಯ್ಕ ವಿಚಾರಣೆ ಮಾಡಿ, ಅವನ ಬಳಿ ಇರುವ ಕಾರ್ ವಶಕ್ಕೆ ಪಡೆದಿದ್ದಾರೆ. ಕಾರು ನೀಡದ ಕಾರಣದ ಜೊತೆಗೆ ಅವರ ಕಿರುಕುಳಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಟ್ಟಿನಲ್ಲಿ ಪ್ರೀತಿಸಿದ ನಂತರ ಒಂದಾಗಬೇಕಿದ್ದ, ಜೀವ ಬೇರೆಯಾಗಿವೆ. ಮತ್ತೊಂದೆಡೆ ರಕ್ತ ಹಂಚಿ ಹುಟ್ಟಿದ ಸಹೋದರ ಬಾರದ ಲೋಕಕ್ಕೆ ತೆರಳಿದ್ದಾನೆ. ಈ ಎಲ್ಲ ಘಟನೆ ನಡುವೆ ತಮ್ಮನ ಸಾವಿಗೆ ಸಹೋದರ ಪ್ರೇಮ ಕಾರಣವಾ ಅಥವಾ ಯುವತಿಯ ಮನೆಯವರ ಕಿರುಕುಳ ಕಾರಣವಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.