ಕೂಗು ನಿಮ್ಮದು ಧ್ವನಿ ನಮ್ಮದು

ಇಬ್ಬರ ನಡುವೆ ಜಗಳ; ಬಿಡಿಸಲು ಹೋದವನನ್ನ ಚಾಕುವಿನಿಂದ ಇರಿದು ಕೊಲೆ

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ತಂದುಕೊಟ್ಟಿದೆ. ಚುನಾವಣೆ ಮುಗಿದ ಕೂಡಲೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಬಿಜೆಪಿ ಪಕ್ಷದಿಂದ ಆರೋಪಗಳು ಕೇಳಿ ಬಂದಿದೆ. ಅದರಂತೆ ಯಾದಗಿರಿ ನಗರದಲ್ಲೂ ಚುನಾವಣೆ ಮುಗಿದ ಎರಡೇ ದಿನಕ್ಕೆ ಕೊಲೆಯೊಂದು ನಡೆದು ಹೋಗಿದೆ. ಇಲ್ಲಿ ಕೊಲೆಯಾದ ವ್ಯಕ್ತಿ 44 ವರ್ಷದ ಶ್ರೀನಿವಾಸ್. ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ನಿವಾಸಿಯಾಗಿರುವ ಶ್ರೀನಿವಾಸ್ ಮೇ.15 ರ ರಾತ್ರಿ ಕೆಲಸವನ್ನ ಮುಗಿಸಿಕೊಂಡು ಹೈದ್ರಾಬಾದ್ ರಸ್ತೆಯಲ್ಲಿರುವ ರಾಯಲ್ ಗಾರ್ಡನ್ ಎನ್ನುವ ಹೋಟೆಲ್ಗೆ ಊಟಕ್ಕೆ ಹೋಗಿದ್ದ. ಊಟಕ್ಕೆ ಕುಳಿತ್ತಿದ್ದ ಕೂಡ. ಹೀಗೆ ಕುಳಿತುಕೊಂಡಾಗ ಹೋಟೆಲ್ ಹೊರಗಡೆ ಹೋಟೆಲ್ ಮಾಲೀಕ ಹಾಗೂ ಪಕ್ಕದಲ್ಲೇ ಇರುವ ಬಾರ್ ಮಾಲೀಕನ ಮದ್ಯ ಜಗಳ ನಡೆದಿತ್ತು. ಊಟಕ್ಕೆ ಕುಳಿತ್ತಿದ್ದ ಶ್ರೀನಿವಾಸ್ ಎದ್ದು ಹೊರಗಡೆ ಬಂದು ಜಗಳ ಬಿಡಿಸಲು ಮುಂದಾಗಿದ್ದ. ಇದೇ ಅವನ ಜೀವವನ್ನ ಕಸಿದುಕೊಂಡಿದೆ.

ಹೌದು ಜಗಳ ಬಿಡಿಸಿದ ಕೂಡಲೇ ಜಗಳ ಕೂಡ ತಣ್ಣಗಾಗಿತ್ತು. ಆದ್ರೆ, ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹ್ಮದ್ ಅನಾಸ್ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಬಾರ್ ಮಾಲೀಕ ಚಂದ್ರಶೇಖರ್​ಗೆ ಕೊಲೆ ಮಾಡಲು ಮುಂದಾಗುತ್ತಾನೆ. ಆದ್ರೆ, ಚಂದ್ರಶೇಖರ್ ಸ್ವಲ್ಪದರಲ್ಲೇ ಪಾರಾಗಿದ್ದು, ಪಕ್ಕದಲ್ಲೇ ನಿಂತಿದ್ದ ಶ್ರೀನಿವಾಸ್ ಹೊಟ್ಟೆಗೆ ಚಾಕು ಬಿದ್ದಿದೆ. ಹೊಟ್ಟೆಗೆ ಚಾಕು ಬಿಳುತ್ತಿದ್ದ ಹಾಗೆ ಶ್ರೀನಿವಾಸ್ ಕೆಳಗಡೆ ಕುಸಿದು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಸ್ಥಳದಲ್ಲೇ ನೆರದಿದ್ದ ಜನ ಏಕ್ ದಮ್ ಹೌಹಾರಿ ಹೋಗುತ್ತಾರೆ. ಇಲ್ಲಿ ಕೊಲೆ ನಡೆಯುತ್ತೆಂದು ಯಾರು ಕೂಡ ಊಹಿಸರಲಿಲ್ಲ. ಆದ್ರೆ, ಕ್ಷಣಮಾತ್ರದಲ್ಲೇ ಸ್ಥಳದಲ್ಲೇ ಕೊಲೆ ನಡೆದು ಹೋಗಿದೆ.

error: Content is protected !!