ಬೆಳಗಾವಿ: ಕೇಂದ್ರ ಅಪರಾಧ ದಳದ ಪೊಲೀಸರು 1.2 ಲಕ್ಷ ರೂ ಮೌಲ್ಯದ ಡ್ರಗ್ಸ್’ನ್ನು ವಶಕ್ಕೆ ಪಡೆದುಕೊಂಡಿದ್ದು, ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳಗಾವಿಯ ಸಮರ್ಥ ನಗರದ ನಿವಾಸಿ ಸಂಜಯ್ ಪರಶುಮ್ರಾಮ್ ಪಾಟೀಲ್ (32) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ನೇತೃತ್ವದ ಪೊಲೀಸ್ ತಂಡ ಬೆಳಗಾವಿಯ ಸಮರ್ಥ ನಗರ ಬಳಿ ದಾಳಿ ನಡೆಸಿತ್ತು. ದಾಳಿ ವೇಳೆ 200 ವಿವಿಧ ಪ್ಯಾಕೆಟ್‌ಗಳಲ್ಲಿ ಸುತ್ತಿಡಲಾಗಿದ್ದ 1.20 ಲಕ್ಷ ಮೌಲ್ಯದ 24 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.