ಕೂಗು ನಿಮ್ಮದು ಧ್ವನಿ ನಮ್ಮದು

ದಾವಣಗೆರೆ: ಕುಡಿದ ಮತ್ತಿನಲ್ಲಿ ಪೊಲೀಸ್‌ ಠಾಣೆ ಮುಂದೆ ಜಗಳ, ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ

ದಾವಣಗೆರೆ: ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ಮಾಡಿದ ಮುಂಬೈ ಮೂಲದ ಇಬ್ಬರು ಯುವತಿಯರು ಸೇರಿ ನಾಲ್ವರನ್ನ ಬಂಧಿಸಿದ ಘಟನೆ ನಗರದಲ್ಲಿ ನಿನ್ನೆ(ಮಂಗಳವಾರ) ತಡರಾತ್ರಿ ನಡೆದಿದೆ. ಹಣಕಾಸಿನ ವಿಚಾರಕ್ಕಾಗಿ ಪರಸ್ಪರ ಜಗಳ ತೆಗೆದ ಯುವತಿಯರು ವಿದ್ಯಾನಗರ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾವನ್ನೇ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಯುವತಿಯರು ಹಾಗೂ ಜೊತೆಗಿದ್ದವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಓರ್ವ ಪೊಲೀಸ್ ಕಾನ್ಸ್‌ಸ್ಟೇಬಲ್‌ ಗಾಯಗೊಂಡಿದ್ದಾರೆ.ಮಂಜುನಾಥ ಹಾಗೂ ಹರ್ಷ ಎಂಬುವರು ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಮುಂಬೈನಿಂದ ಇಬ್ಬರು ಹುಡುಗಿಯರನ್ನ ಕರೆಯಿಸಿದ್ದರು. ಶಿಕಾರಿಪುರ ಮೂಲದ ಮಂಜುನಾಥ್ ಮತ್ತು ಹರ್ಷ ವಕೀಲರೆಂಬ ಮಾಹಿತಿ ಲಭ್ಯವಾಗಿದೆ.


ಯುವತಿಯರಿಗೆ ಕೊಡಬೇಕಾದ ಹಣ ಕೊಡದ ಹಿನ್ನೆಲೆಯಲ್ಲಿ ಜಗಳ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಯುವತಿಯರು ಹಾಗೂ ಜೊತೆಗಿದ್ದವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಯುವತಿಯರು ಹಾಗೂ ಮಂಜುನಾಥ ಮತ್ತು ಹರ್ಷಾ ಎಂಬುವರನ್ನ ಬಂಧಿಸಲಾಗಿದೆ. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಪೊಲೀಸರು.

error: Content is protected !!