ಕೂಗು ನಿಮ್ಮದು ಧ್ವನಿ ನಮ್ಮದು

ಮದುವೆಯಾದ ಎರಡುವರೆ ತಿಂಗಳಲ್ಲೇ ಬೇರೊಂದು ಮದುವೆಯಾಗಿ ಗಂಡ ಎಸ್ಕೇಪ್: ಪತ್ನಿ ಕಂಗಾಲು

ನೆಲಮಂಗಲ: ಮದುವೆಯಾದ ಎರಡುವರೆ ತಿಂಗಳಲ್ಲೇ ಪತ್ನಿಗೆ ತಿಳಿದಂತೆ ಬೇರೊಂದು ಮದುವೆಯಾಗಿ ಪತಿ ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ. ಪೂರ್ಣಿಮಾ(20), ಪ್ರದೀಪ್ (24), ಪರಸ್ಪರ ಎರಡು ವರ್ಷ ಲವ್ ಬಳಿಕ ಮದುವೆಯಾಗಿತ್ತು. ಮನೆಗೆ ಆಧಾರವಾಗಿರುತ್ತೇನೆಂದು ತಾಯಿ ಕಾಲಿಗೆ ಬಿದ್ದು ಮದುವೆಯಾಗಿದ್ದ.

ಆದ್ರೆ ಏಕಾಏಕಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಪತಿ ಬೇಕೆಂದು ಪತ್ನಿ ಪೂರ್ಣಿಮಾ ಮನೆ ಬಳಿ ಧರಣಿ ಮಾಡಿದ್ದು, ಅಜ್ಜಿ ವಿರೋಧದ ನಡುವೆಯೂ ಪೊಲೀಸರ ಸಹಾಯದಿಂದ ಮನೆ ತಲಾಶ್ ಮಾಡಿದ್ದು, ತಲಾಶ್ ವೇಳೆ ಮನೆಯಲ್ಲಿ ಪತಿ ಕಂಡುಬಂದಿಲ್ಲ. ಜೂನ್ ಒಂದರಂದು ತುಮಕೂರಿನ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಮದುವೆ ಆಗಿತ್ತು. ಹಣ, ಚಿನ್ನಾಭರಣಗಳನ್ನ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದ ಬಗ್ಗೆ ಆರೋಪ ಮಾಡಿದ್ದು, ಘಟನೆ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

error: Content is protected !!