ಕೂಗು ನಿಮ್ಮದು ಧ್ವನಿ ನಮ್ಮದು

ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ, ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

ಬಾಗಲಕೋಟೆ: ಕಟಿಂಗ್ ಅಂಗಡಿಯಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು.

ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ ಇಪ್ಪತ್ತು ರೂಪಾಯಿ ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ

error: Content is protected !!