ಕೂಗು ನಿಮ್ಮದು ಧ್ವನಿ ನಮ್ಮದು

ಬುದ್ದಿ ಮಾತು ಹೇಳಿದ ತಮ್ಮನನ್ನೆ ಕೊಂದ ಅಣ್ಣ

ಯಾದಗಿರಿ: ಬುದ್ದಿ ಮಾತು ಹೇಳಿದ ಎಂದು ಕೋಪಗೊಂಡ ಅಣ್ಣ, ತಮ್ಮನನ್ನು ಕೊಂದಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದು, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಂಪಾಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ತಮ್ಮ ದೇವಿಂದ್ರ ಚವ್ಹಾಣ್(28)ನನ್ನು ಅಣ್ಣ ಜಯರಾಮ್ ಕ್ಷುಲ್ಲಕ ಬುದ್ದಿ ಮಾತನ್ನು ಹೇಳಿದ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. 
ಜಯರಾಮ್ ಮತ್ತು ದೇವಿಂದ್ರ ಸಹೋದರರು ಯುಗಾದಿ ಹಿನ್ನೆಲೆ ಊರಿಗೆ ಬಂದಿದ್ದರು.

ಈ ವೇಳೆ ಭಾನುವಾರ ತಡರಾತ್ರಿ ದೇವಿಂದ್ರ ಮತ್ತು ಜಯರಾಮ ನಡುವೆ ಜಗಳ ಪ್ರಾರಂಭವಾಗಿದೆ. ಈ ಸಮಯದಲ್ಲಿ ದೇವಿಂದ್ರ ಜಮ್ಲಾನಾಯಕ ಮಕ್ಕಳ ಸಹವಾಸ ಮಾಡಬೇಡ ಎಂದು ಜಯರಾಮ್‍ಗೆ ಬುದ್ದಿ ಹೇಳಿದ್ದಾನೆ. ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಜಯರಾಮ್ ಕುಟುಂಬಸ್ಥರ ಮುಂದೆಯೇ ದೇವಿಂದ್ರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ. ಪ್ರಸ್ತುತ ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುರಮಠಕಲ್ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

error: Content is protected !!