ಕೂಗು ನಿಮ್ಮದು ಧ್ವನಿ ನಮ್ಮದು

ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

ಬೆಂಗಳೂರು: ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ಯುವತಿ ವೇಲ್ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಚಂದ್ರಾಲೇಔಟ್‍ನಲ್ಲಿ ನಡೆದಿದೆ. ಬೆಂಗಳೂರಿನ ಚಂದ್ರಾಲೇಔಟ್‍ನಲ್ಲಿ ಈ ಘಟನೆಯು ಭಾನುವಾರ ಮುಂಜಾನೆ ಸಂಭವಿಸಿದೆ. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಯುವತಿ ಶಾಜಿಯಾ ಬಾನು ಕೆಲಸ ಮಾಡುತ್ತಿದ್ರು. ಈ ವೇಳೆ ಶಾಜಿಯಾ ಬಾನು ವೇಲ್ ಮಷಿನ್‍ಗೆ ಸಿಲುಕಿ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಫ್ಯಾಕ್ಟರಿ ಸಿಬ್ಬಂದಿ ಶಾಜಿಯಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಾಜಿಯಾ ಬಾನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಶಾಜಿಯಾ ಬಾನು ಸಾವಿನ ಹಿನ್ನೆಲೆ ಫ್ಯಾಕ್ಟರಿ ಮಾಲೀಕನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿಗಳು ಫ್ಯಾಕ್ಟರಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

error: Content is protected !!