ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರಿನಲ್ಲಿ ಆಕ್ಟೀವ್ ಆಯ್ತು ಗಡಾರಿ ಗ್ಯಾಂಗ್

ಬೆಂಗಳೂರು: ನೆಲಮಂಗಲ ಗ್ರಾಮಾಂತರ ಪ್ರದೇಶಗಳಲ್ಲಿ ಗ್ಯಾಂಗ್‍ ಒಂದು ಸಣ್ಣ ದೊಂದು ಗಡಾರಿ ಮೂಲಕ ಯಾರಿಗೂ ಸಂಶಯ ಆಗದಂತೆ ಅಂಗಡಿಗಳ ಶೆಟರ್ ಓಪನ್ ಮಾಡಿ ಕಳ್ಳತನ ಮಾಡಿದ್ದು, ನೆಲಮಂಗಲ ತಾಲೂಕಿನ ಬೂದಿಹಾಲ್ ಗ್ರಾಮದ ಸೋಮಣ್ಣ ಎಂಬುವವರ ಬೈಲಾಂಜನೇಯ ಪ್ರಾವಿಷನ್ ಸ್ಟೋರ್ ಶಟರ್ ಬೀಗ ಮುರಿದು, ಕಳ್ಳತನ ಮಾಡಿ ಕಿಡಗೇಡಿಗಳು ಎಸ್ಕೇಪ್ ಆಗಿದ್ದಾರೆ.

ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವ ಮೂವರು ಕಳ್ಳರು CC ಕ್ಯಾಮೆರಾ ನೋಡಿಕೊಂಡು ಯಾವುದೇ ಭಯವಿಲ್ಲದೆ ಕಳ್ಳತನ ಮಾಡಿದ್ದಾರೆ. ಪ್ರಾವಿಷನ್ ಸ್ಟೊರ್ ಅಲ್ಲಿದ್ದ ಹಣ, ತಂಬಾಕು ಉತ್ಪನ್ನ ಮತ್ತು ಮೊಬೈಲ್ ದೋಚಿ ಕಳ್ಳರು ಪರಾರಿಯಾಗಿದ್ರೆ. ಕಳ್ಳರ ಕರಾಮತ್ತಿನಿಂದ ಜನರು ಆತಂಕಕ್ಕೆ ಒಳಗಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

error: Content is protected !!