ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳಾ ಸಹೋದ್ಯೋಗಿಗೆ ಚುಂಬಿಸಿದ ಅಧಿಕಾರಿ ಅರೆಸ್ಟ್

ಲಕ್ನೋ: ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡುತ್ತಿದ್ದ ಸರ್ಕಾರಿ ಅಧಿಕಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದು, ಆಕೆಯ ಮೇಲೆ ಹಲ್ಲೆ ಮಾಡಿದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಇಚ್ಚಾ ರಾಮ್ ಯಾದವ್ ಬಂಧಿತ ಅಧಿಕಾರಿ. ಯುಪಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಗುತ್ತಿಗೆ ಉದ್ಯೋಗಿಯಾಗಿರುವ ಮೂವತ್ತು ವರ್ಷದ ವಿವಾಹಿತ ಮಹಿಳೆ ಮೇಲೆ ಇಚ್ಚಾ ರಾಮ್ ಯಾದವ್ ಹಲ್ಲೆ ಮಾಡಿದ್ದಾರೆ.

ಈ ವೀಡಿಯೋ ಈಗ ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಪರಿಣಾಮ ಇಚ್ಚಾ ರಾಮ್ ಮೇಲೆ FIR ದಾಖಲಾಗಿದ್ದು, ಆತನನ್ನು ಲಕ್ನೋ ಪೊಲೀಸರು ಬಂಧಿಸಿದ್ರು. ವೀಡಿಯೋದಲ್ಲಿ ಇಚ್ಚಾ ರಾಮ್ ಯಾದವ್, ಮಹಿಳೆಯ ಮೇಲೆ ಪಟ್ಟು ಬಿಡದೆ ಹಲ್ಲೆ ಮಾಡುತ್ತಿದ್ದು, ಮಹಿಳೆ ಅವನನ್ನು ದೂರ ತಳ್ಳತ್ತ, ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಪಡುತ್ತಿರುವ ದೃಶ್ಯವು ವೀಡಿಯೋದಲ್ಲಿ ಸೆರೆಯಾಗಿದೆ. ಅದಲ್ಲದೆ ವೀಡಿಯೋದಲ್ಲಿ ಯಾದವ್ ಆಕೆಯನ್ನು ಚುಂಬಿಸುವ ದೃಶ್ಯವು ಸಹ ಕಾಣಿಸಿದೆ.

೧ ವಾರದ ಹಿಂದೆಯೇ ಈ ಕುರಿತು ಮಹಿಳೆ ದೂರು ನೀಡಿದ್ದು, ಪೊಲೀಸರು ತಡವಾಗಿ ಆತನನ್ನು ಬಂಧಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇವತ್ತು ಮುಂಜಾನೆ, ಟ್ವಿಟ್ಟರ್‍ನಲ್ಲಿ ಇಚ್ಛಾ ರಾಮ್ ಜೈಲಿನಲ್ಲಿರುವ ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅನೇಕರು ಯುಪಿ ಪೊಲೀಸರ ತಡವಾದ ಕ್ರಮವನ್ನು ತೆಗೆದುಕೊಂಡಿರುವುದರ ಕುರಿತು ಪ್ರಶ್ನಿಸಿದ್ದಾರೆ
ಈ ಕುರಿತು ಮಹಿಳೆ ದೂರಿನಲ್ಲಿ, ನಾನು ೨೦೧೩ ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ೨೦೧೮ ರಿಂದ ವಿಭಾಗದ ಉಸ್ತುವಾರಿ ಅಧಿಕಾರಿ ಇಚ್ಚಾ ರಾಮ್ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಎಂದು ತಿಳಿಸಿದ್ದಾರೆ.

error: Content is protected !!