ಚಿಕ್ಕಬಳ್ಳಾಪುರ: ಹನ್ನೆರಡು ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಮಾಡಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಂಭವಿಸಿದೆ. ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಮತ್ತು ಪ್ರದೀಪ್ ಬಂಧನಕೊಳ್ಳಗಾದವರು. ಆಕ್ಟೋಬರ್ ಇಪ್ಪತ್ತೇಳು ರಂದು ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಲಾರಿ ಕಳುವಾಗಿದೆ ಎಂದು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ರು.
ಉಬ್ಬಾಗಿಡ್ಡಯ್ಯ ಆಂಧ್ರ ಮೂಲದ ಜೈ ಮಾರುತಿ ಟ್ರಾನ್ಸ್ ಪೋರ್ಟ್ ಮಾಲೀಕ ಇವರು ರಾಯಚೂರಿನಿಂದ ಬೆಂಗಳೂರಿಗೆ ೩೦ ಟನ್ ಅಕ್ಕಿ ಸಾಗಾಟ ಮಾಡುತ್ತಿದ್ರು. ಸಾಗಾಟದ ವೇಳೆ ಬಾಗೇಪಲ್ಲಿ ಸುಂಕಲಮ್ಮ ದೇಗುಲದ ಹತ್ತಿರ ಲಾರಿ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ರು. ಅಕ್ಕಿ ಸಮೇತ ಲಾರಿ ಕಳವಾಗಿದೆ ಎಂದು ನಾಟಕವಾಡಿ, ಕಂಪ್ಲೇಟ್ ಕೊಟ್ಟಿದ್ರು. ಈ ರೀತಿಯಾಗಿ ನಾಟಕವಾಡಿ ಗಿಡ್ಡಯ್ಯ ಅಕ್ಕಿಯನ್ನು ಆಂಧ್ರದಲ್ಲಿ ಮುಚ್ಚಿಟ್ಟಿದ್ದು, ಲಾರಿಯನ್ನು ತಮಿಳುನಾಡಿನ ಸೇಲಂ ನಲ್ಲಿ ಗುಜ್ರಿಗೆ ಮಾರಿ ಹಾಕಿದ್ರು.
ಈಗ ಪೊಲೀಸರು ಗಿಡ್ಡಯ್ಯನ ಖತರ್ನಾಕ್ ಪ್ಲಾನ್ ಬಯಲು ಮಾಡಿದ್ದಾರೆ ಇವರು ಹನ್ನೆರಡು ಲಕ್ಷ ಮೌಲ್ಯದ ಅಕ್ಕಿ ಮತ್ತು ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಹಾಕಿರುವುದನ್ನು ಪೋಲೀಸರು ಬೆಳಕಿಗೆ ತಂದಿದ್ದಾರೆ.