ಮಂಡ್ಯ: ದಾಯಾದಿ ಜಗಳದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆಯು ಮಂಡ್ಯ ಜಿಲ್ಲೆಯ K.R ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮೂಡನಹಳ್ಳಿ ಗ್ರಾಮದ ರಘು ಎಂಬ 29 ವರ್ಷ ವಯಸ್ಸಿನ ಯುವಕ ಮೃತ ದುರ್ದೈವಿ. ಒಂದೂವರಿ ತಿಂಗಳುಗಳ ಹಿಂದೆ ಅಷ್ಟೇ ರಘು ಮದುವೆಯಾಗಿದ್ದು, ಇದೇ ಸೆಪ್ಟೆಂಬರ್ ೨೫ ರ ರಾತ್ರಿ ಈ ಘಟನೆ ನಡೆದಿದೆ. ಅವತ್ತು ಸುಟ್ಟಗಾಯಗಳಿಂದ ಬಳಲುತ್ತಿದ್ದ ರಘು ಅವರನ್ನು ಮೈಸೂರಿನ K.R ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಘು ಮೃತಪಟ್ಟಿದ್ದಾರೆ. ರಘು ತನ್ನದೇ ಸ್ವಂತ ಕಾರು ಹೊಂದಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ರು. ಲಾಕ್ಡೌನ್ ಹಿನ್ನೆಲೆ ಕಳೆದ ಕೆಲ ತಿಂಗಳಿನಿಂದ ಮೂಡನಹಳ್ಳಿಯಲ್ಲೇ ಇದ್ರು. ಸೆಪ್ಟೆಂಬರ್ ೨೫ರ ರಾತ್ರಿ ಕಾರನ್ನು ಸ್ವಚ್ಛಗೊಳಿಸಿ ಮಾರನೆ ದಿನ ಬೆಂಗಳೂರಿಗೆ ಹೋಗಲು ಸಿದ್ಧತೆ ನಡೆಸಿದ್ರು.
ಕಾರಿನ ಒಳಗೆ ಕುಳಿತು ಗ್ಲಾಸ್ ಮೇಲೆತ್ತುವ ವೇಳೆ ರಘುಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಎಂದು ಮೃತನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಈ ಕೃತ್ಯ ಮಾಡಿದ್ದು, ರಘು ದಾಯಾದಿ ಶಿವು ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಶಿವು ಇದೀಗ ತಲೆ ಮರೆಸಿಕೊಂಡಿದ್ದಾನೆ.
ಈ ಪ್ರಕರಣವು ಈಗ K.R ಪೇಟೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.