ಕೂಗು ನಿಮ್ಮದು ಧ್ವನಿ ನಮ್ಮದು

ಬಂಗಾರದ ಖರೀದಿ ನೆಪ ಮಾಡಿ ಸರ ಕದ್ದು, ಯುವಕ ಪರಾರಿ

ಚಿಕ್ಕಬಳ್ಳಾಪುರ: ಚಿನ್ನ ಖರೀದಿ ಮಾಡುವ ನೆಪದಲ್ಲಿ ಚಿನ್ನದ ಅಂಗಡಿಗೆ ಬಂದ ಯುವಕ ಓರ್ವ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಸಂಭವಿಸಿದೆ. ಪಟ್ಟಣದ ನರೇಶ್ ಜ್ಯುವೆಲ್ಲರಿ ಅಂಗಡಿಯಲ್ಲಿ ಜನಜಂಗುಳಿ ಯನ್ನೇ ಬಂಡವಾಳ ಮಾಡಿಕೊಂಡ ಯುವಕ ನೋಡು ನೋಡುತ್ತಲೇ ಸೈಲೆಂಟ್ ಆಗಿ ಬಂಗಾರದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಯುವಕ ಚಿನ್ನದ ಸರವನ್ನು ಕದ್ದು ಪರಾರಿಯಾದ ಬಳಿಕ ಅನುಮಾನಗೊಂಡು ಶಾಪ್ ನವರು ತದನಂತರ CCTV ಪರಿಶೀಲನೆ ನಡೆಸಿದಾಗ ಯುವಕನ ಕಳ್ಳತನದ ಕೃತ್ಯ ಬಯಲಾಗಿದೆ.
ಅಂಗಡಿಯಲ್ಲಿ ಬಂಗಾರದ ಖರೀದಿ ಮಾಡುತ್ತಿದ್ದ ಮಹಿಳೆಯರನ್ನ ವಿಚಾರಿಸಿದಾಗ ಆ ಯುವಕ ಅವರ ಸಂಬಂಧಿ ಅಲ್ಲ ಎಂದು ತಿಳಿದು ಬಂದಿದೆ. ಆ ಯುವಕನಿಗಾಗಿ ಅಂಗಡಿ ಮಾಲೀಕ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

error: Content is protected !!