ಕೂಗು ನಿಮ್ಮದು ಧ್ವನಿ ನಮ್ಮದು

ರೋಚಕತೆ ಸೃಷ್ಟಿಸಿರುವ ಭಾರತ-ಆಸ್ಟ್ರೇಲಿಯಾ ಫೈನಲ್ಗೆ ಮಳೆ ಅಡ್ಡಿ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಭಾರತವನ್ನು 296 ರನ್ಗಳಿಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಕಲೆಹಾಕಿದೆ. ಸದ್ಯ ಕಾಂಗರೂ ಪಡೆ 296 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಭಾರತ ಆದಷ್ಟು ಬೇಗ ಆಸೀಸ್ ಪಡೆಯನ್ನು ಆಲೌಟ್ ಮಾಡಬೇಕಿದೆ. 350+ ರನ್ ಲೀಡ್ ಆದರೆ ಭಾರತಕ್ಕೆ ಗೆಲುವು ಕಷ್ಟವಾಗಲಿದೆ.

ನಾಲ್ಕು ಹಾಗೂ ಐದು ಕೇವಲ ಎರಡು ದಿನ ಬಾಕಿ ಇರುವ ಕಾರಣ ಈ ಫೈನಲ್ ಕದನ ತುದಿಗಾಲಿನಲ್ಲಿ ನಿಲ್ಲಿಸಿದೆ. ಆದರೆ, ಉಳಿದಿರುವ ಎರಡು ದಿನ ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿದೆ. ಲಂಡನ್ ಹವಾಮಾನವು ಎರಡೂ ತಂಡಗಳಿಗೆ ಮತ್ತು ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದೆ. ಜೂನ್ 10 ನಾಲ್ಕನೇ ದಿನ ಮತ್ತು ಜೂನ್ 11 ಅಂತಿಮ ದಿನದಂದು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

error: Content is protected !!