ವಿಜಯಪುರ; ಸಚಿವ ಸಿ.ಪಿ. ಯೋಗೇಶ್ವರ್ ಅವರು ಶಾಸಕ ಬಸನಗೌಡ ಯತ್ನಾಳ್ ಅವರನ್ನು ಭೇಟಿಯಾಗಿ ವಿಜಯಪುರದಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ನಡೆದ ಭೊಜನದ ವೇಳೆ ಬಿಜೆಪಿ ಮುಖಂಡರಾದ ಚಿತ್ರ ನಟಿ ಶ್ರುತಿ ಹಾಗೂ ಇತರರು ಹಾಜರಿದ್ದದ್ದು ಗಮನಾರ್ಹವಾಗಿತ್ತು. ಭೇಟಿಯ ವೇಳೆ ಸಚಿವ ಯೊಗೇಶ್ವರಗೆ ಬಸನಗೌಡ ಯತ್ನಾಳ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಕೆಲ ಕಾಲ ಶಾಸಕ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ ರಹಸ್ಯವಾಗಿ ಚರ್ಚೆ ನಡೆಸಿದರು.
ಈ ಬರವಣಿಗೆ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕುರಿತು ತೆರೆಮರೆಯಲ್ಲಿ ನಡೆಯುತ್ತಿದೆಯಾ ಪ್ಲಾನ್? ಸಿಎಂ ವಿರೋಧಿಗಳನ್ನು ಒಂದುಗೂಡಿಸ್ತಿದ್ದಾರಾ ಸಚಿವ ಸಿ ಪಿ ಯೋಗೇಶ್ವರ? ಎಂಬ ಪ್ರಶ್ನೆ ಬಿಜೆಪಿಯನ್ನು ಮತ್ತೆ ಕಾಡತೊಡಗಿದೆ.
ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ ಅವರು ಸಿಎಂ ಬಿಎಸ್ ವೈ ಹಾಗೂ ವಿಜಯೇಂದ್ರ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಯತ್ನಾಳ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಜಯಪುರ ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಯತ್ನಾಳ್ ಹಾಗೂ ಯೋಗೇಶ್ವರ ಭೇಟಿ ನಡೆದಿದೆ.