ಕೂಗು ನಿಮ್ಮದು ಧ್ವನಿ ನಮ್ಮದು

ಸಂವಿಧಾನ ತಿದ್ದುಪಡಿ ಹೇಳಿಕೆ, ಸಂಸದ ಹೆಗಡೆ ವಿರುದ್ದ ಶಾಸಕ ಯತ್ನಾಳ ವಾಗ್ದಾಳಿ

ಯಾದಗಿರಿ: ಸಂವಿಧಾನ ತಿದ್ದುಪಡಿ ಮಾಡ್ತೇವೆ ಎನ್ನುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಯಾದಗಿರಿಯಲ್ಲಿ ಸ್ವ ಪಕ್ಷದ ಸಂಸದನ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ನಾವು ಯಾವುದೇ ಸಂವಿಧಾನ ತಿದ್ದುಪಡಿ ಮಾಡುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ ಅವರಿಗೆ ನಿಜವಾದ ಗೌರವ ಕೊಟ್ಟವರು ಮೋದಿಯವ್ರು. ಯಾರೋ ಒಬ್ಬ ಮೂರ್ಖ ಸಂವಿಧಾನ ತಿದ್ದುಪಡಿ ಮಾಡ್ತಿನಿ‌ ಅಂದ್ರೇ ಒಪ್ಪುವುದಿಲ್ಲ ಎಂದು ಹೆಗಡೆ ವಿರುದ್ದ ಕೆಂಡಕಾರಿದ್ರು.

ಬಿಜೆಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವಂತದ್ದು. ಅಂಬೇಡ್ಕರ ಹುಟ್ಟಿದ ಮನೆ, ಹುಟ್ಟಿದ ಊರು, ಅವರು ಪಡೆದ ಶಿಕ್ಷಣ ದೆಹಲಿಯಲ್ಲಿ ಕೊನೆಯುಸಿರೆಳೆದ ಮನೆಗೆ ನೂರಾರು ಕೋಟಿ ಖರ್ಚು ಮಾಡಿ ಮೋದಿ ತೀರ್ಥ ಕ್ಷೇತ್ರ ಮಾಡಿದ್ದಾರೆ. ಯಾವುದೋ ಒಬ್ಬ ಸಂವಿಧಾನ ಬದಲಾವಣೆ ಮಾಡ್ತೆವೆ ಅನ್ನೋದು ಮೂರ್ಖತನ. ಅವನಿಗೆ ಬಿಜೆಪಿ ಬೆಂಬಲವಿಲ್ಲ ನಾವ್ಯಾರು ಸಂವಿಧಾನ ತಿದ್ದುಪಡಿ ಒಪ್ಪುವುದಿಲ್ಲ ಎಂದ ಯತ್ನಾಳ ವಾಗ್ದಾಳಿ ನಡೆಸಿದ್ರು.

error: Content is protected !!