ಕೂಗು ನಿಮ್ಮದು ಧ್ವನಿ ನಮ್ಮದು

ವಿಚಿತ್ರವಾಗಿ ವರ್ತಿಸುತ್ತಿರುವ ಸರ್ಕಾರವನ್ನು ನಿಯಂತ್ರಿಸಿ: ಕೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ದೆಹಲಿ: ಈ ವಾರದ ಆರಂಭದಲ್ಲಿ ಸಂಸತ್ತಿನಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮಾಡಿದ ಟೀಕೆಗಳನ್ನು ಅಳಿಸಿದ್ದರ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಮತ್ತಷ್ಟು ಪ್ರಶ್ನಿಸಿದೆ ಬಿಜೆಪಿ, ಸಂಸತ್ ಕಲಾಪಗಳು ಒಮ್ಮತ, ಸಹಯೋಗ ಮತ್ತು ಹೊಂದಾಣಿಕೆಯ ಮೂಲಕ ನಡೆಯಲು ಬಯಸುವುದಿಲ್ಲ, ಆದರೆ ಘರ್ಷಣೆ, ಅವ್ಯವಸ್ಥೆ ಮತ್ತು ಸಂಘರ್ಷದ ಮೂಲಕ ನಡೆಯಬೇಕೆಂದು ಬಯಸುತ್ತದೆ. ವಿಚಿತ್ರವಾಗಿ ವರ್ತಿಸುತ್ತಿರುವ ಸರ್ಕಾರವನ್ನು ನಿಯಂತ್ರಿಸಿ ಎಂದ ಪಕ್ಷ, ತಮ್ಮ ನಾಯಕರು ಯಾವುದೇ ಆಕ್ಷೇಪಾರ್ಹ ಪದಗಳನ್ನು ಅಲ್ಲಿ ಹೇಳಿಲ್ಲ ಎಂದಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾಗ ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದಾನಿ ಆಸ್ತಿ ಹೆಚ್ಚಾಗಿದ್ದು, ಬಿಲಿಯನೇರ್ ಗೌತಮ್ ಅದಾನಿಯೊಂದಿಗೆ ಪ್ರಧಾನಿಯವರಿಗೆ ಇರುವ ನಂಟು ಏನೆಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು.

ಆ ಭಾಷಣಗಳಲ್ಲಿ ಮಾನಹಾನಿಕರ, ಅಸಭ್ಯ ಅಥವಾ ಅಸಂಸದೀಯ ಅಥವಾ ಘನತೆಯಿಲ್ಲದ ಯಾವುದೇ ಪದವಿರಲಿಲ್ಲ” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಖರ್ಗೆಯವರು ಅತ್ಯಂತ ನಯವಾಗಿ ಮತ್ತು ಗೌರವಯುತವಾಗಿ ಮಾತನಾಡಿದ್ದಾರೆ ಮತ್ತು ವಾಸ್ತವಿಕ ನಿರೂಪಣೆಗಳ ಮೇಲೆ ಅವರು ಭಾಷಣ ಮಾಡಿದ್ದಾರೆ. ಅಂದ ಹಾಗೆ ಸಂಸತ್ ದಾಖಲೆಗಳಿಂದ ತೆಗೆದು ಹಾಕಿದ ಭಾಗಗಳು ಕೇಳಿದ ಪ್ರಶ್ನೆಗಳನ್ನು ಸಹ ಒಳಗೊಂಡಿವೆ ಎಂಬುದು ಅಚ್ಚರಿಯುಂಟು ಮಾಡಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರನ್ನು “ಸದನಗಳ ಒಳಗೆ ವಾಕ್ ಸ್ವಾತಂತ್ರ್ಯದ ಪಾಲಕರು ಮತ್ತು ರಕ್ಷಕರು” ಎಂದು ಬಣ್ಣಿಸಿದ ಸಿಂಘ್ವಿ, “ಸಂಸತ್ತಿನ ಉಭಯ ಸದನಗಳಲ್ಲಿ ಮುಕ್ತ, ಸ್ಪಷ್ಟ ಮತ್ತು ನಿರ್ಭೀತ ಚರ್ಚೆಗೆ ಅವಕಾಶ ನೀಡದಿದ್ದರೆ, ಪ್ರಜಾಪ್ರಭುತ್ವವು ದುರ್ಬಲವಾಗಿದೆ ಎಂದರ್ಥ. ನಿರ್ಭೀತ ಚರ್ಚೆಗೆ ಕಾರಣವಾಗುವ ವಾಕ್ ಸ್ವಾತಂತ್ರ್ಯವನ್ನು ತಡೆದರೆ ಸಂಸತ್ ಸಂಸತ್ ಆಗಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಬಹಳ ಹಿಂದಿನಿಂದಲೂ ಸರ್ಕಾರವನ್ನು ಕ್ರೋನಿ ಕ್ಯಾಪಿಟಲಿಸಂ ಎಂದು ಆರೋಪಿಸುತ್ತಿದೆ. ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಅದಾನಿ ಕಂಪನಿಗಳ ಮೇಲೆ ಕಾಂಗ್ರೆಸ್ ಮತ್ತಷ್ಟು ವಾಗ್ದಾಳಿ ಮಾಡಿದೆ.ಗಾಂಧಿಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದ ಕಾನೂನು ಸಚಿವ ಕಿರಣ್ ರಿಜಿಜು ವ್ಯಥಾ ಆರೋಪಗಳನ್ನು ಮಾಡಬೇಡಿ, ನಿಮ್ಮ ಆರೋಪಕ್ಕೆ ಸಾಕ್ಷ್ಯನೀಡಿ ಎಂದಿದ್ದಾರೆ

error: Content is protected !!