ಕೂಗು ನಿಮ್ಮದು ಧ್ವನಿ ನಮ್ಮದು

ನಮ್ಮ ಸರ್ಕಾರದಲ್ಲಿ BJPಗೆ ನಾಯಕರಿಗೆ ಕಳಚಲಾಗದ ಪ್ಯಾಂಟ್ ಭಾಗ್ಯ ನೀಡುತ್ತೇವೆ ಕಾಂಗ್ರೆಸ್

ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ BJP ನಾಯಕರಿಗೆ ಕಳಚಲಾಗದ ಪ್ಯಾಂಟ್ ಭಾಗ್ಯ ನೀಡುತ್ತೇವೆ. ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ BJP ನಾಯಕರನ್ನು ವ್ಯಂಗ್ಯ ಮಾಡಿದೆ. ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಪಂಚೆ ಆಕಸ್ಮಿಕವಾಗಿ ಕಳಚಿದೆ. ಆದ್ರೆ BJP ನಾಯಕರು ತಮ್ಮ ಪಂಚೆಯನ್ನು ಕಳಚುವುದು ಅಸಹ್ಯ, ಕಳಚಿದ ಪಂಚೆಯನ್ನು ತಾವೇ ವಿಡೀಯೊ ಮಾಡಿಕೊಳ್ಳವುದು ಮತ್ತುCD ಬಿಡುಗಡೆಗೆ ಕೋರ್ಟ್‍ನಲ್ಲಿ ತಡೆಯಾಜ್ಞೆ ತರುವುದು ಇನ್ನೂ ಅಸಹ್ಯವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ BJP ನಾಯಕರಿಗೆ ಟಾಂಗ್ ಕೊಟ್ಟಿದೆ.

ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕನ್ನಡ ನಾಡಿನ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ CD ಮಾಡಿಕೊಳ್ಳುವ BJP ನಾಯಕರಿಗೆ, ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅನೈತಿಕ ಪೋಲೀಸ್‍ ಗಿರಿಯನ್ನು ಸಹಿಸುವುದಿಲ್ಲ ಎಂದಿದ್ರು. ಆದ್ರೆ ಸುರತ್ಕಲ್‍ ನಲ್ಲಿ BJPಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೋಲೀಸ್‍ ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ? ರಾಜ್ಯವನ್ನು ತಾಲಿಬಾನಿಕರಣ ಮಾಡಲು BJP ಮುಂದಾಗಿದೆ ಎಂದು ಕಾಂಗ್ರೇಸ್ ಟೀಕೆ ಮಾಡಿದೆ.

error: Content is protected !!