ಬೆಂಗಳೂರು: ಜಾರಕಿಹೊಳಿ ಕುಟುಂಬದ ವಿರುದ್ದ ವ್ಯವಸ್ಥಿತವಾಗಿ ದೊಡ್ಡ ಷಡ್ಯಂತ್ರವೇ ನಡೀತಾಯಿದೆ. ಪ್ರಕರಣವನ್ನ ಸಿಬಿಐ ಅಥವಾ ಸಿಐಡಿಗೆ ಒಪ್ಪಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದ್ದಾರೆ. ವಿವಾದಿತ ಸಿಡಿ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ವ್ಯವಸ್ಥಿತ ಸಂಚು. ದೂರು ಕೊಟ್ಟ ವ್ಯಕ್ತಿ ಯಾರು ಎಂಬುದು ಗೊತ್ತಿಲ್ಲ. ಆ ಯುವತಿ ಯಾರು ಎಂಬುದು ಬಹಿರಂಗ ಪಡಿಸಿಲ್ಲ. ಅಷ್ಟೇ ಅಲ್ಲದೇ ವಿಡಿಯೋವನ್ನ ಎಡಿಟ್ ಮಾಡಿ ದುಬೈ ಅಥವಾ ರಷ್ಯಾದಿಂದ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ. ಬಳಿಕ ಸಿಡಿ ಮಾಡಿ ಮಾಧ್ಯಮದವರಿಗೆ ಕೊಡಲಾಗಿದೆ. ಇದರ ಹಿಂದೆ ದೊಡ್ಡ ರಾಜಕಾರಣಿಯ ಕೈವಾಡವಿದೆ. ಆ ಕಾಣದ ಕೈಗಳು ಯಾವವು ಎಂಬುದು ಗೊತ್ತಾಗಬೇಕಿದೆ.
ಇನ್ನು ಈ ಕುರಿತು ತನಿಖೆ ನಡೆದು ಸಿಡಿ ಅಸಲಿಯತ್ತು ಬಹಿರಂಗವಾಗಬೇಕು ಎಂದು ಒತ್ತಾಯಿಸಿದ್ರು. ಇಂದಿನ ಯುಗದಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಮೇಲ್ನೋಟಕ್ಕೆ ಇದು ನಕಲಿ ಸಿಡಿ ಎಂದು ಕಂಡು ಬರುತ್ತಿದೆ. ಯುವತಿಗೆ ಅನ್ಯಾಯವಾಗಿದ್ದರೆ ಅವಳೇ ಬಂದು ದೂರು ಕೊಡಬಹುದಿತ್ತು. ಆದ್ರೆ ದುಬೈನಲ್ಲಿ ಕುಳಿತು ಆಟವಾಡುತ್ತಿದ್ದಾರೆ. ಇಂತಹ ನಕಲಿ ಸಿಡಿ ಪ್ರಕರಣಕ್ಕೆ ರಾಜೀನಾಮೆ ನೀಡಿದ್ರೆ ತಪ್ಪು ಸಂದೇಶ ಹೋಗುತ್ತದೆ. ಈ ರೀತಿ ನಕಲಿ ಸಿಡಿ ಮಾಡುತ್ತಾ ಹೋದರೆ ಇಡೀ ವಿಧಾನಸಭೆ ಖಾಲಿಯಾಗುತ್ತೇ ಎಂದಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಒಂದು ವೇಳೆ ರಮೇಶ ಜಾರಕಿಹೊಳಿ ತಪ್ಪು ಮಾಡಿದ್ದರೆ ನಾನೇ ಮುಂದೆ ನಿಂತು ರಾಜೀನಾಮೆ ಕೊಡಸ್ತೀನಿ. ಆದ್ರೆ ತನಿಖೆ ಇಲ್ಲದೇ ರಾಜೀನಾಮೆ ನೀಡುವುದು ಸರಿಯಲ್ಲ, ನಾನು ಸೇರಿದಂತೆ ಬಿಜೆಪಿಯ ಸಚಿವರು, ಶಾಸಕರು ರಮೇಶ ಜಾರಕಿಹೊಳಿ ಬೆನ್ನಿಗೆ ನಿಲ್ಲುತ್ತೇವೆ ಎಂದಿದ್ದಾರೆ.