ಬೆಂಗಳೂರು: ಆಪ್ತನ ಸೋಲಿಗೆ ಕಾರಣ ಆದವರ ವಿರುದ್ಧ ಶಿಸ್ತು ಕ್ರಮ ಕೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಅಲೆಯ ನಡುವೆಯೂ 7 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸೋಮಶೇಖರ್ ಸೋಲಿಗೆ ಕಾಂಗ್ರೆಸ್‌ನ ಪ್ರದೀಪ್‌ಕುಮಾರ್ ಹಾಗೂ ನವೀನ್‌ಕುಮಾರ್ ಕಾರಣ ಎಂದು ಎಂ.ಕೆ ಸೋಮಶೇಖರ್ ಅವರು ಸಿದ್ದರಾಮಯ್ಯಗೆ ದೂರು ನೀಡಿದ್ದರು.