ಕೂಗು ನಿಮ್ಮದು ಧ್ವನಿ ನಮ್ಮದು

ಮೂವರ ವಿರುದ್ಧ ಹೈಕಮಾಂಡ್‍ಗೆ ಮುಖ್ಯಮಂತ್ರಿ ದೂರು?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರ ಅಸಮಾಧಾನ ಮುಂದುವರಿದಿದ್ದು, ಈ ಕುರಿತು ಹೈಕಮಾಂಡ್‍ಗೆ ದೂರು ನೀಡಲು ಮುಖ್ಯಮಂತ್ರಿಗಳು ಮುಂದಾಗಿದೆ ಎನ್ನಲಾಗಿದೆ. ಸಂಪುಟದಲ್ಲಿ ತಾವು ಬಯಸಿರುವ ಖಾತೆಗಳು ಸಿಗದ್ದಕ್ಕೆ ಮುನಿಸಿಕೊಂಡಿರುವ ಇಬ್ರು ಮತ್ತು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಲಾಬಿಗೆ ಮುಂದಾಗಿರುವ ಒಬ್ಬರ ನಡೆಯ ಬಗ್ಗೆ ಹೈಕಮಾಂಡ್‍ಗೆ ವಿವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪನವರು ಮನವಿ ಮೇರೆಗೆ ಆಗಸ್ಟ್ ೧೫ ರಂದು ಹೊಸ ಜಿಲ್ಲೆ ವಿಜಯ ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ರು. ಇದೆ ವೇಳೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಆನಂದ್ ಸಿಂಗ್, ಅಭೀ ಪಿಕ್ಚರ್ ಬಾಕೀ ಹೈ ಅನ್ನೋ ಹೇಳಿಕೆಯನ್ನು ನೀಡಿದ್ರು.

ಆನಂದ್ ಸಿಂಗ್ ಅವರನ್ನ ಇರೋ ಖಾತೆಯಲ್ಲಿಯೇ ಮುಂದುವರಿಸಬೇಕಾ ಅಥವಾ ಬೇಡವಾ? ಒಂದು ವೇಳೆ ಖಾತೆ ಬದಲಾದ್ರೆ ಇನ್ನು ಉಳಿದ ಸಚಿವರು ಮುನಿಸಿಕೊಂಡು ತಮಗೂ ಪ್ರಭಾವಿ ಖಾತೆ ಕೊಡುವಂತೆ ಉಳಿದಿರುವ ಮಂತ್ರಿಗಳು ಬೇಡಿಕೆ ಇಡಬಹುದು. ಆದರೆ ಖಾತೆ ಬದಲಿಸದೇ ಇದ್ರೆ ಆನಂದ್ ಸಿಂಗ್ ರಾಜೀನಾಮೆ ಆತಂಕ ಸಹ ಮುಖ್ಯಮಂತ್ರಿಗಳಿಗೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಡಿ ಪ್ರಕರಣದಿಂದಾಗಿ ಸಂಪುಟದಿಂದ ದೂರ ಉಳಿದಿರುವ ಶಾಸಕ ರಮೇಶ್ ಜಾರಕಿಹೊಳಿ ಕೂಡ ಮಂತ್ರಿಗಿರಿಗಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಇತ್ತ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುನಿಸಿಕೊಂಡಿರುವ MLC ಸಿ.ಪಿ.ಯೋಗೇಶ್ವರ್ ಲಾಬಿಗೆ ಮುಂದಾಗಿದ್ದಾರೆ. ಈ ಮೂರು ಜನರಿಂದ ಸರ್ಕಾರಕ್ಕೆ ಆಡಳಿತವನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ನೀವೇ ಒಂದು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಹೈಕಮಾಂಡ್‍ಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಬಿಎಸ್ವೈ ರಾಜೀನಾಮೆ ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರದ ಮೇಲೆ RSS ಹಿಡಿತ ಸಾಧಿಸುತ್ತಿರುವ ಬಗ್ಗೆ ತಿಳಿದು ಬಂದಿದೆ.

ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಪ್ತ ವಲಯದಲ್ಲಿ ಸಂಘ ಪರಿವಾರ ಸೂಚಿಸಿದ ಸಚಿವರು ಇರಬೇಕು. RSS ಸೂಚಿಸಿದವರನ್ನೇ ಸುತ್ತ ಮುತ್ತ ನಿಯೋಜಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಕಚೇರಿ, ಸಚಿವರ ಕಚೇರಿಯಲ್ಲಿ ಸಂಘ ಸೂಚಿತರಿಗಷ್ಟೇನಾ ಜಾಗ ಮೀಸಲಿಡುವ ಮೂಲಕ ಎಲ್ಲರ ಮೇಲೆ ನೇರ ನಿಗಾ ಇಡುವ ಸಲುವಾಗಿ RSS ತಂತ್ರ ರಚಿಸಿದೆ ಎಂದು ತಳಿದು ಬಂದಿದೆ.

error: Content is protected !!