ಬೆಂಗಳೂರು: ‘ನಾನು ನಮ್ಮ ಜಿಲ್ಲೆಗೆ ಹೋಗ್ತಾ ಇದ್ದು, ನಮ್ಮ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಇಟ್ಟಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಗೃಹಜ್ಯೋತಿ, ಗೃಹಲಕ್ಷ್ಮಿ ಬಗ್ಗೆ ಯಾವುದೇ ಗೊಂದಲ ಇಲ್ಲ. ಸುಮ್ಮನೆ ನೀವೇ ಗೊಂದಲ ಕ್ರಿಯೇಟ್ ಮಾಡ್ಬೇಡಿ. ಮ್ಯಾನಿಫ್ಯಾಸ್ಟೊದಲ್ಲಿ ಏನ್ ಘೋಷಣೆ ಮಾಡಿದ್ದೇವೊ ಅದನ್ನ ಜಾರಿಗೆ ತರ್ತಾ ಇದ್ದೀವಿ. ನಾವು ನುಡಿದಂತೆ ನಡೆಯುವವರು ಎಂದಿದ್ದಾರೆ.