ಶಿಗ್ಗಾಂವಿ ಸಮೀಪದ ಖುರ್ಸಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಕನಸು ಕಂಡಿದ್ದರು. ತಾವು ಶಾಸಕರಾಗಿದ್ದಾಗಲೇ ಕಂಡಿದ್ದ ಕನಸು ನನಸು ಮಾಡಲು ಬಸವರಾಜ್ ಬೊಮ್ಮಾಯಿ, ಸಿಎಂ ಆದ ಮೇಲೆ ಈ ಜವಳಿ ಪಾರ್ಕ್ ಸ್ಥಾಪಿಸಿ ಲೋಕಾರ್ಪಣೆ ಮಾಡಬೇಕು ಅಂದುಕೊಂಡಿದ್ದರು. ಸಿಎಂ ಕನಸು ನನಸಾಗುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲಾ. ತಾಂತ್ರಿಕ ಕಾರಣಗಳಿಂದ ಈ ಜವಳಿ ಪಾರ್ಕ್ ಸಿಎಂ ಅಧಿಕಾರಾವಧಿಯಲ್ಲಿ ಮುಗಿಯುವುದಿಲ್ಲಾ ಎಂಬ ಮಾತುಗಳು ಈಗ ಕೇಳಲಾರಂಭಿಸಿವೆ.
ಇತ್ತ ಜವಳಿ ಪಾರ್ಕ್ ನಿರ್ಮಾಣವಾಗುತ್ತಿರುವ ಖುರ್ಸಾಪುರ ಗುಡ್ಡದಲ್ಲಿ ಸಹ, ಕಲ್ಲು ಹತ್ತಿದ್ದು ಅಲ್ಲಿಯ ಕೆಲಸ ಸಹ ತಪ್ತಿದಾಯಕವಾಗಿಲ್ಲ ಎನ್ನುವ ಅಂಶ ಪತ್ತೆಯಾಗಿದೆ. ಶಿಗ್ಗಾಂವಿ ಯಾವುದೇ ಮುಖ್ಯಮಂತ್ರಿಯಿರಲಿ, ತಮ್ಮ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ತಮ್ಮ ತವರು ಜಿಲ್ಲೆಗೆ ಅಥವಾ ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ಏನಾದರೊಂದು ಶಾಶ್ವತ ಕೊಡುಗೆಯನ್ನು ನೀಡುವ ಇರಾದೆಯನ್ನು ಹೊಂದಿರುತ್ತಾರೆ. ಹಾಗೆಯೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ತಮ್ಮ ಕ್ಷೇತ್ರವಾದ ಶಿಗ್ಗಾಂವಿ ಸವಣೂರು ಕ್ಷೇತ್ರವನ್ನ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿಸುವ ಕನಸು ಕಂಡವರು.
ಅದರ ಜೊತೆಗೆ, ಶಿಗ್ಗಾಂವಿ ಸಮೀಪದ ಖುರ್ಸಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಕನಸು ಕಂಡಿದ್ದರು. ತಾವು ಶಾಸಕರಾಗಿದ್ದಾಗಲೇ ಕಂಡಿದ್ದ ಕನಸು ನನಸು ಮಾಡಲು ಬಸವರಾಜ್ ಬೊಮ್ಮಾಯಿ, ಸಿಎಂ ಆದ ಮೇಲೆ ಈ ಜವಳಿ ಪಾರ್ಕ್ ಸ್ಥಾಪಿಸಿ ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ಲೋಕಾರ್ಪಣೆ ಮಾಡುವ ಮಹದಾಸೆ ಹೊಂದಿದ್ದರು. ಆದರೆ ಸಿಎಂ ಕನಸು ನನಸಾಗುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲಾ. ತಾಂತ್ರಿಕ ಕಾರಣಗಳಿಂದ ಈ ಜವಳಿ ಪಾರ್ಕ್ ಸಿಎಂ ಅಧಿಕಾರಾವಧಿಯಲ್ಲಿ ಮುಗಿಯುವುದಿಲ್ಲಾ ಎಂಬ ಮಾತುಗಳು ಈಗ ಕೇಳಲಾರಂಭಿಸಿವೆ.
ಬೊಮ್ಮಾಯಿ ಒಬ್ಬ ಸುಧಾಕರ್ನಿಂದ ಕಾಂಗ್ರೆಸ್ ಪಾರ್ಟಿ ನಲುಗಿ ಹೋಗಿದೆ: ಇನ್ನೂ ಇವರ ಮುಖವಾಡ ಕಳಚುತ್ತೆ: ಸಿಎಂ
ಇತ್ತ ಜವಳಿ ಪಾರ್ಕ್ ನಿರ್ಮಾಣವಾಗುತ್ತಿರುವ ಖುರ್ಸಾಪುರ ಗುಡ್ಡದಲ್ಲಿ ಸಹ, ಕಲ್ಲು ಹತ್ತಿದ್ದು ಅಲ್ಲಿಯ ಕೆಲಸ ಸಹ ತಪ್ತಿದಾಯಕವಾಗಿಲ್ಲ ಎನ್ನುವ ಅಂಶ ಪತ್ತೆಯಾಗಿದೆ. ಆದರೂ ಸಹ ಸಿಎಂ ಬಸವರಾಜ್ ಬೊಮ್ಮಾಯಿ ಚುನಾವಣಾ ನೀತಿ ಸಂಹಿತಿ ಪ್ರಕಟವಾಗುವ ಮುನ್ನ ಯೋಜನೆ ಲೋಕಾರ್ಪಣೆಗೊಳಿಸುವ ಎಲ್ಲ ಸಿದ್ದತೆಯನ್ನ ನಡೆಸಿದ್ದಾರೆ.
ಪ್ರಥಮ ಬಾಗೆ ಖಾಸಗಿ ಕಂಪನಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣವಾಗುತ್ತಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಟೆಕ್ಸಟೈಲ್ ಪಾರ್ಕ್ ರಾಜ್ಯಕ್ಕೆ ಮಾದರಿಯಾಗಬೇಕು ಎನ್ನುವ ಇಂಗಿತವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹೊಂದಿದ್ದಾರೆ.
ಜವಳಿ ಪಾರ್ಕ್ ನಿಂದಾಗಿ ಖುರ್ಸಾಪುರ ಸೇರಿದಂತೆ ಶಿಗ್ಗಾಂವಿ ಸವಣೂರು ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಹೊಲಿಗೆ ಕಲಿತ ಮಹಿಳೆಯರಿಗೆ ವಿವಿಧ ಉದ್ಯೋಗಗಳು ಸಿಗುತ್ತವೆ. ಜೊತೆಗೆ ಸ್ಥಳೀಯರು ರೈತರು ಸೇರಿದಂತೆ ವಿವಿಧ ವಲಯಗಳ ಜನರ ಬಾಳಿಗೆ ಜವಳಿ ಪಾರ್ಕ್ ಬೆಳಕಾಗಲಿದೆ ಎಂದು ಮಹತ್ವಾಕಾಂಕ್ಷೆ ಇಟ್ಟುಕೊಂಡು ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ ಈ ರೀತಿಯ ಪಾರ್ಕ್ ಸ್ಥಾಪಿಸಿಲು ಮುಂದಾಗಿದ್ದಾರೆ ಎನ್ನಲಾಗಿದೆ. ಜವಳಿ ಪಾರ್ಕ್ ನಿರ್ಮಾಣವಾದರೆ ಸೈಜಿಂಗ್ ಘಟಕ, ಕಲರಿಂಗ್ ಘಟಕ, ಸ್ಪಿನ್ನಿಂಗ್ ಘಟಕ, ಪವರ್ ಲೂಮ್ ಬಟ್ಟೆಗಳ ಉತ್ಪಾದನೆ ಮಾಡಬಹುದು.
ಗಾರ್ಮೆಂಟ್ಸ್ ಇದ್ದು ಅದರಿಂದ ಬಟ್ಟೆಗಳನ್ನು ಹೊಲಿದು ಬೇರೆ ಬೇರೆ ರಾಜ್ಯಗಳಿಗೆ ವಿದೇಶಗಳಿಗೆ ಸಹ ರಪ್ತು ಮಾಡಬಹುದಾಗಿದೆ. ಪ್ರತ್ಯಕ್ಷವಾಗಿ 15 ಸಾವಿರ ಜನರಿಗೆ ಉದ್ಯೋಗ, ಪರೋಕ್ಷವಾಗಿ 15 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಈ ಯೋಜನೆಯಿಂದ ಹಲವು ವಲಯಗಳು ಚೇತರಿಸಿಕೊಳ್ಳಲಿದೆ. ವಿಶ್ವದಲ್ಲಿಯೇ ಅತಿಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ಒಂದಾದ ಹಾವೇರಿ ಜಿಲ್ಲೆಗೆ ಇದು ವರದಾನವಾಗಲಿದೆ. 2020-21 ರ ಅಯವ್ಯಯದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಖುರ್ಸಾಪುರದಲ್ಲಿ ಜವಳಿ ಪಾರ್ಕ್ ನಿರ್ಮಿಸುವ ಕುರಿತಂತೆ ಯೋಜನೆ ಘೋಷಿಸಲಾಗಿತ್ತು.
ಬಂಕಾಪುರ ಹೋಬಳಿಯ ಖುರ್ಸಾಪುರ ಗ್ರಾಮದ ಸರ್ವೆ ನಂಬರ್ 43 ರಲ್ಲಿ 59 ಎಕರೆ 34 ಗುಂಟೆ ಸ್ಥಳವನ್ನ ಪಾರ್ಕ್ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಜವಳಿ ಪಾರ್ಕ್ ಸಂಪೂರ್ಣ ಸರ್ಕಾರದ ಒಡೆತನದಲ್ಲಿರುತ್ತದೆ. ಟೆಕ್ಸೋರ್ಟ್ ಇಂಡಸ್ಟ್ರೀಜ್ ಪ್ರೈ.ಲಿಮಿಟಡ್ 45 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧ ಉಡುಪು ಘಟಕ ಸ್ಥಾಪಿಸಿ 3000 ಜನರಿಗೆ ಉದ್ಯೋಗ ನೀಡಬಹುದಾಗಿದೆ.
ಭಾರತ ಸರ್ಕಾರದ ಅಂಗಸಂಸ್ಥೆಯಿಂದ ವಿನಾಯತಿಯನ್ನ ಈ ಕಂಪನಿ ಪಡೆದಿದೆ. ಸರ್ಕಾರ ಕಳೆದ ಬಜೆಟ್ನಲ್ಲಿ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಪ್ರಸ್ತುತ ವರ್ಷದ ಬಜೆಟ್ನಲ್ಲಿ 15 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸರ್ಕಾರ ಮತ್ತು ಖಾಸಗಿ ಕಂಪನಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಇತ್ತ ಚುನಾವಣಾ ನೀತಿ ಸಂಹಿತಿ ಹತ್ತಿರವಾಗುತ್ತಿದೆ. ಬಸವರಾಜ್ ಬೊಮ್ಮಾಯಿ ಪ್ರಸ್ತುತ ಸಿಎಂ ಅಧಿಕಾರಾವಧಿಯಲ್ಲಿ ಜವಳಿ ಪಾರ್ಕ್ ಲೋಕಾರ್ಪಣೆಗೊಳ್ಳುವದು ಸಿಎಂ ಕಂಡ ಕನಸು ನನಸಾಗುವುದೇ ಎಂಬುದನ್ನ ಕಾದು ನೋಡಬೇಕಿದೆ.