ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರದಲ್ಲಿ ಕನ್ನಡದ ಇಬ್ರು ಬಿಗ್ ಸ್ಟಾರ್ ಹೀರೋಯಿನ್ಗಳು ಅಲ್ಲು ಅರ್ಜುಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಈಗ ಟಿ ಟೌನ್ನಲ್ಲಿ ಕೇಳಿಬರುತ್ತಿದೆ.
ಇನ್ನೂ ಪುಷ್ಪ ಪಿಚ್ಚರ್ ನಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ಬಳಿಕ ವೇಣು ಶ್ರೀ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಐಕಾನ್’ ಚಿತ್ರದಲ್ಲಿ ನಟಿಸಲಿದ್ದಾರೆ.
ಇನ್ನೂ ಈ ಪಿಚ್ಚರ್ ನಲ್ಲಿ ಇಬ್ರು ನಟಿಯರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಜೊತೆಗೆ ಈ ಪಿಚ್ಚರ್ ಅಲ್ಲಿ ಅಲ್ಲುಗೆ ಜೋಡಿಯಾಗಿ ಕನ್ನಡದ ನಟಿ ಪೂಜಾ ಹೆಗ್ಡೆ ಮತ್ತು ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯರಾಗಿ ಆಯ್ಕೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇನ್ನೂ ಈಗಾಗಲೇ DJ ಮತ್ತು ಅಲಾ ವೈಕುಂಠಪುರಮುಲೋ ಚಿತ್ರದಲ್ಲಿ ಅಲ್ಲುಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ರು. ಜೊತೆಗೆ ಈ ಎರಡು ಚಿತ್ರಗಳು ಟಾಲಿವುಡ್ ಬಾಕ್ಸ್ ಆಫಿಸ್ನಲ್ಲಿ ಸಖತ್ ಸೌಂಡ್ ಮಾಡಿದ್ದವು.
ಇನ್ನೂ ರಶ್ಮಿಕಾ ಮಂದಣ್ಣ ಪುಷ್ಪ ಪಿಚ್ಚರನಲ್ಲಿ ಇದೇ ಪ್ರಥಮ ಬಾರಿಗೆ ಅಲ್ಲು ಅರ್ಜುನ್ಗೆ ನಾಯಕಿಯಾಗಿ ಕಾಣಿಸಲ್ಲಿದ್ದಾರೆ, ಈ ಪಿಚ್ಚರ ಕುರಿತು ಟಾಲಿವುಡ್ ಅಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದೆ. ಇನ್ನೂ ಈ ನಡುವೆ ಐಕಾನ್ ಪಿಚ್ಚರಕ್ಕಾಗಿ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣರಿಗೆ ಚಿತ್ರತಂಡವು ಕಾಲ್ ಶೀಟ್ ಕೇಳಿದ್ರು, ಬಳಿಕ ಒಂದೇ ಪಿಚ್ಚರನಲ್ಲಿ ಈ ಇಬ್ರು ಹೀರೋಯಿನ್ಸ್ಗಳು ಅಲ್ಲು ಅರ್ಜುನ್ ಜೊತೆ ತೇರೆಯನ್ನು ಹಂಚಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.